Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ವಾಯು ಗುಣಮಟ್ಟ ಸಾಧನೆ: ರಾಜ್ಯದ ಆರು ನಗರಗಳಿಗೆ ರಾಷ್ಟ್ರಮಟ್ಟದ ಮಾನ್ಯತೆ
9 ಡಿಸೆಂಬರ್ 2025
* ಇಂಧನ ಮತ್ತು ಶುದ್ಧ ವಾಯು ಸಂಶೋಧನಾ ಕೇಂದ್ರ (CREA) ಪ್ರಕಟಿಸಿದ ಇತ್ತೀಚಿನ ಅಧ್ಯಯನ ವರದಿ, ಭಾರತದ ನಗರಗಳಲ್ಲಿ ವಾಯು ಗುಣಮಟ್ಟದ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದೆ. ಈ ವರದಿ ಪ್ರಕಾರ, ದೇಶದಲ್ಲಿ ಶುದ್ಧ ವಾಯು ಹೊಂದಿರುವ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಆರು ನಗರಗಳು ಅಗ್ರ ಸ್ಥಾನ ಪಡೆಯಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಮೈಸೂರು, ಕೊಪ್ಪಳ, ಚಿಕ್ಕಮಗಳೂರು, ಯಾದಗಿರಿ, ಚಾಮರಾಜನಗರ ಹಾಗೂ ವಿಜಯಪುರ ನಗರಗಳು ಉತ್ತಮ ವಾಯು ಗುಣಮಟ್ಟದಿಂದ ದೇಶದ ಟಾಪ್–10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
* ಇದೇ ಸಮಯದಲ್ಲಿ, ವರದಿ ಉತ್ತರ ಭಾರತದ ಹಲವು ಭಾಗಗಳಲ್ಲಿ ವಾಯು ಮಾಲಿನ್ಯ ತೀವ್ರವಾಗುತ್ತಿರುವ ಎಚ್ಚರಿಕೆಯನ್ನೂ ನೀಡಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ನಗರವು ದೇಶದಲ್ಲೇ ಅತಿ ಹೆಚ್ಚು ಮಾಲಿನ್ಯಗೊಂಡ ನಗರವಾಗಿ ಗುರುತಿಸಲ್ಪಟ್ಟಿದ್ದು, ನವೆಂಬರ್ ತಿಂಗಳಲ್ಲಿ ಇಲ್ಲಿ ಪಿಎಂ2.5 ಮಟ್ಟವು ಅಪಾಯಕಾರಿ ಹಂತ ತಲುಪಿದೆ. ಗಾಜಿಯಾಬಾದ್ ಜೊತೆಗೆ ನೋಯ್ಡಾ, ದಿಲ್ಲಿ, ಗ್ರೇಟರ್ ನೋಯ್ಡಾ, ಹಾಪುರ್, ಬಾಗ್ಪತ್, ಸೋನಿಪತ್, ರೋಹಕ್ ಹಾಗೂ ಬಹದ್ದೂರ್ಗಢ ನಗರಗಳು ಅತ್ಯಂತ ಮಾಲಿನ್ಯಗೊಂಡ ನಗರಗಳ ಪಟ್ಟಿಯಲ್ಲಿ ಸೇರಿವೆ. ಈ ಹತ್ತು ನಗರಗಳಲ್ಲಿ ಹೆಚ್ಚಿನವು ಉತ್ತರ ಪ್ರದೇಶ ಹಾಗೂ ಹರಿಯಾಣ ರಾಜ್ಯಗಳಿಗೆ ಸೇರಿರುವುದು ವಿಶೇಷ.
* ರಾಜ್ಯ ಮಟ್ಟದಲ್ಲಿ ನೋಡಿದರೆ, ರಾಜಸ್ಥಾನವು ಅತಿ ಹೆಚ್ಚು ಮಾಲಿನ್ಯ ಹೊಂದಿರುವ ರಾಜ್ಯವಾಗಿ ಮೊದಲ ಸ್ಥಾನದಲ್ಲಿದ್ದು, ಮೇಘಾಲಯದ ಶಿಲ್ಲಾಂಗ್ ನಗರವು ದೇಶದಲ್ಲೇ ಅತಿ ಶುದ್ಧ ವಾಯು ಹೊಂದಿರುವ ನಗರ ಎಂಬ ಗೌರವವನ್ನು ಪಡೆದಿದೆ.
* ಈ ಅಧ್ಯಯನ ವರದಿ, ವಾಯು ಮಾಲಿನ್ಯದ ಪರಿಣಾಮಗಳಿಂದ ಮಾನವ ಆರೋಗ್ಯ, ಪರಿಸರ ಮತ್ತು ಹವಾಮಾನಕ್ಕೆ ಆಗುವ ಹಾನಿಯ ಬಗ್ಗೆ ಜನಜಾಗೃತಿ ಮೂಡಿಸಲು ಮಹತ್ವದ ದಾಖಲೆ ಆಗಿದೆ. ಜೊತೆಗೆ, ಶುದ್ಧ ವಾಯು ಹೊಂದಿರುವ ನಗರಗಳನ್ನು ಮಾದರಿಯಾಗಿ ತೆಗೆದುಕೊಂಡು ಇತರ ನಗರಗಳು ಪರಿಸರ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವನ್ನು ಇದು ಎತ್ತಿಹಿಡಿಯುತ್ತದೆ. ಹೆಚ್ಚುತ್ತಿರುವ ಮಾಲಿನ್ಯ ಸಮಸ್ಯೆಯನ್ನು ತಗ್ಗಿಸಲು ಪರಿಣಾಮಕಾರಿ ಪರಿಸರ ನೀತಿಗಳು ಮತ್ತು ಕಠಿಣ ಕ್ರಮಗಳು ಅನಿವಾರ್ಯವೆಂಬ ಸಂದೇಶವನ್ನೂ ಈ ವರದಿ ಸ್ಪಷ್ಟವಾಗಿ ನೀಡುತ್ತದೆ.
Take Quiz
Loading...