* ದಿಲ್ಲಿ ಸರ್ಕಾರವು ಬಡವರು, ದಿನಗೂಲಿ ಕಾರ್ಮಿಕರು ಹಾಗೂ ಕಡಿಮೆ ಆದಾಯದ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶದಿಂದ ಅಟಲ್ ಕ್ಯಾಂಟೀನ್ ಯೋಜನೆನ್ನು ಜಾರಿಗೆ ತಂದಿದೆ. ಈ ಕ್ಯಾಂಟೀನ್‌ಗಳು ಕರ್ನಾಟಕದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತಿವೆ. "ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನ ಸ್ಮರಣಾರ್ಥ ಈ ಯೋಜನೆ ಆರಂಭಿಸಲಾಗಿದೆ."* ನಗರಾದ್ಯಂತ ಒಟ್ಟು 100 ಅಟಲ್ ಕ್ಯಾಂಟೀನ್‌ಗಳನ್ನು ಹಂತ ಹಂತವಾಗಿ ಆರಂಭಿಸಲಾಗಿದ್ದು, ಮೊದಲ ಹಂತದಲ್ಲಿ 45 ಕ್ಯಾಂಟೀನ್‌ಗಳು ಸೇವೆ ಆರಂಭಿಸಿವೆ. ಉಳಿದ 55 ಕ್ಯಾಂಟೀನ್‌ಗಳನ್ನು ಮುಂದಿನ ದಿನಗಳಲ್ಲಿ ಉದ್ಘಾಟಿಸುವ ಯೋಜನೆ ಇದೆ. * ಪ್ರತಿ ಕ್ಯಾಂಟೀನ್‌ನಲ್ಲಿ ದಿನಕ್ಕೆ ಎರಡು ಸಮಯಗಳಲ್ಲಿ ಊಟ ವಿತರಣೆ ಮಾಡಲಾಗುತ್ತದೆ. => ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ=> ಸಂಜೆ 6:30ರಿಂದ ರಾತ್ರಿ 9:30ರವರೆಗೆಪ್ರತಿ ವೇಳೆಯಲ್ಲಿ 500 ಜನರಿಗೆ ಪೌಷ್ಟಿಕಯುಕ್ತ ಊಟ ಒದಗಿಸಲಾಗುತ್ತದೆ. ಊಟದಲ್ಲಿ ದಾಲ್, ಅನ್ನ, ಚಪಾತಿ, ತರಕಾರಿ ಪಲ್ಯ ಹಾಗೂ ಉಪ್ಪಿನಕಾಯಿ ಸೇರಿರುತ್ತವೆ.* ಈ ಸಂಪೂರ್ಣ ಊಟಕ್ಕೆ ಕೇವಲ ರೂ.5 ದರ ನಿಗದಿಪಡಿಸಲಾಗಿದೆ. ಊಟ ವಿತರಣೆ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ಸುಗಮಗೊಳಿಸಲು ಡಿಜಿಟಲ್ ಟೋಕನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಅಕ್ರಮ ತಡೆದು, ಪ್ರತಿಯೊಬ್ಬ ಅರ್ಹ ವ್ಯಕ್ತಿಗೂ ಸಮಾನವಾಗಿ ಸೇವೆ ದೊರಕುವಂತೆ ಮಾಡಲಾಗಿದೆ ಹಾಗೂ ಈ ಯೋಜನೆ ನಗರದಲ್ಲಿ ಆಹಾರ ಭದ್ರತೆಯನ್ನು ಬಲಪಡಿಸುವ ಮಹತ್ವದ ಸಾಮಾಜಿಕ ಕಲ್ಯಾಣ ಕ್ರಮವಾಗಲಿದೆ.