* ನಟೇಶ್ ಹೆಗಡೆ ನಿರ್ದೇಶನದ, ಅನುರಾಗ್ ಕಶ್ಯಪ್ ನಿರ್ಮಾಣದ ಕನ್ನಡ ಚಿತ್ರ ‘ವಾಘಚಿಪಾಣಿ’ ಬರ್ಲಿನ್ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಗೊಂಡಿದೆ. ಈ ಚಿತ್ರೋತ್ಸವಕ್ಕೆ ಪ್ರವೇಶ ಪಡೆದ ಕನ್ನಡದ ಮೊದಲ ಚಿತ್ರವಾಗಿದೆ.* "ಫೆ.13ರಿಂದ 23ರವರೆಗೆ ನಡೆಯಲಿರುವ ಚಿತ್ರೋತ್ಸವದಲ್ಲಿ 'ಬರ್ಲಿನ್ ಫೋರಂ' ವಿಭಾಗದಲ್ಲಿ ಈ ಚಿತ್ರದ ವರ್ಲ್ಡ್ ಪ್ರೀಮಿಯರ್ ಆಗಲಿದೆ. ಇದು ಸ್ಪರ್ಧಾ ವಿಭಾಗವಾಗಿದ್ದು, 30 ಚಿತ್ರಗಳು ಸ್ಪರ್ಧೆ ಮಾಡುತ್ತಿವೆ."ಎಂದು ನಟೇಶ್ ಹೆಗಡೆ ತಿಳಿಸಿದ್ದಾರೆ.* ಅಮರೇಶ್ ನುಗಡೋಣಿ ಅವರ ದಲಿತ ಮಹಿಳೆ ಕುರಿತಾದ ಕಥೆಯನ್ನು ಹೊಂದಿರುವ ಈ ಚಿತ್ರ ಶಿರಸಿ ಸುತ್ತಮುತ್ತ ಚಿತ್ರೀಕರಣಗೊಂಡಿದೆ.* ವಾಘಚಿಪಾಣಿ ಚಿತ್ರವು ನಟೇಶ್ ಅವರ ಎರಡನೇ ಚಿತ್ರವಾಗಿದೆ. ಅವರ ಮೊದಲ ಚಿತ್ರ ವಿಶಿಷ್ಟ ಕಥಾಹಂದರ ಹೊಂದಿರುವ 'ಪೆದ್ರೊ' ಕೂಡ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿತ್ತು. ‘ಪೆದ್ರೊ’ವನ್ನು ನಿರ್ಮಿಸಿದ್ದ ರಿಷಬ್ ಶೆಟ್ಟಿ ನಿರ್ಮಾಣ ಸಂಸ್ಥೆಯಿಂದಲೇ ವಾಘಚಿಪಾಣಿ ಚಿತ್ರ ಕೂಡ ಪ್ರಾರಂಭಗೊಂಡಿತ್ತು.* ರಿಷಬ್ ಶೆಟ್ಟಿ ಸಿನಿಮಾ ಯೋಜನೆಗೆ ಚಾಲನೆ ನೀಡಿದ್ದರೂ 'ಕಾಂತಾರ' ಚಿತ್ರೀಕರಣದಲ್ಲಿ ಕಾರ್ಯನಿರತರಾಗಿದ್ದರಿಂದ ಸಮಯವನ್ನು ನೀಡಲು ಸಾಧ್ಯವಾಗಿಲ್ಲ. ಪರಿಣಾಮವಾಗಿ ಚಿತ್ರವನ್ನು ಅನುರಾಗ್ ಕಶ್ಯಪ್ ಖರೀದಿಸಿದ್ದಾರೆ.* ಮಲಯಾಳಂ ನಟ ಹಾಗೂ ನಿರ್ದೇಶಕ ದಿಲೀಶ್ ಪೋತನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.* ಅಚ್ಯುತ್ ಕುಮಾರ್, ನಟೇಶ್, ಗೋಪಾಲ್ ಹೆಗಡೆ ಮೊದಲಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಪೆದ್ರೊ’ ಕೂಡ ಬೂಸಾನ್ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿತ್ತು.