* ₹3,700 ಕೋಟಿ ಹೂಡಿಕೆಯನ್ನು ಸೆಳೆಯಲಿರುವ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.* ಈ ಘಟಕ ಎಚ್ಸಿಎಲ್ ಮತ್ತು ಫಾಕ್ಸ್ಕಾನ್ ಜಂಟಿ ಉದ್ಯಮದ ಮೂಲಕ ನಿರ್ಮಾಣವಾಗಲಿದೆ. ತಿಂಗಳಿಗೆ 3.6 ಕೋಟಿ ಚಿಪ್ಗಳ ಉತ್ಪಾದನೆ ಸಾಧ್ಯವಿರುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.* ಈಗಾಗಲೇ ದೇಶದಲ್ಲಿ ಐದು ಸೆಮಿಕಂಡಕ್ಟರ್ ಘಟಕಗಳು ನಿರ್ಮಾಣ ಹಂತದಲ್ಲಿವೆ. ಆರನೇ ಘಟಕವು ಜೆವಾರ್ ವಿಮಾನ ನಿಲ್ದಾಣದ ಸಮೀಪದಲ್ಲಿರಲಿದೆ ಎಂದು ಅವರು ಹೇಳಿದರು.* ಈ ಘಟಕದಲ್ಲಿ ಮೊಬೈಲ್ ಫೋನ್, ಲ್ಯಾಪ್ಟಾಪ್ ಮತ್ತು ಇತರ ಸಾಧನಗಳ ಡಿಸ್ಪ್ಲೇಗಳಿಗೆ ಅಗತ್ಯವಿರುವ ಡ್ರೈವರ್ ಚಿಪ್ಗಳನ್ನು ತಯಾರಿಸಲಾಗುತ್ತದೆ.* ತಿಂಗಳಿಗೆ 20,000 ವೇಫರ್ಗಳ ಉತ್ಪಾದನೆಗೆ ಸೂಕ್ತವಾಗಿರುವಂತೆ ಈ ಘಟಕವನ್ನು ವಿನ್ಯಾಸಗೊಳಿಸಲಾಗಿದ್ದು, 2027ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಘಟಕವು ಸುಮಾರು 2,000 ಉದ್ಯೋಗಾವಕಾಶಗಳನ್ನು ಒದಗಿಸಲಿದೆ ಎಂದು ವೈಷ್ಣವ್ ಹೇಳಿದರು.