* ಉತ್ತರ ಪ್ರದೇಶವು 550 ಕ್ಕೂ ಹೆಚ್ಚು ರೈಲು ನಿಲ್ದಾಣಗಳಿರುವ ಭಾರತದ ಅತ್ಯಂತ ಸಂಪರ್ಕಿತ ರಾಜ್ಯಗಳಲ್ಲಿ ಒಂದಾಗಿದೆ. ಉತ್ತರ ಮಧ್ಯ ರೈಲ್ವೆ ವಲಯದಲ್ಲಿ 230+ ನಿಲ್ದಾಣಗಳು ಮತ್ತು ಈಶಾನ್ಯ ರೈಲ್ವೆಯಲ್ಲಿ 170+ ನಿಲ್ದಾಣಗಳಿವೆ. ಸಾವಿರಾರು ಪ್ರಯಾಣಿಕರಿಗೆ ಪ್ರತಿದಿನ ಸುಗಮ ಸಂಚಾರವನ್ನು ಈ ಜಾಲ ವ್ಯವಸ್ಥೆ ಒದಗಿಸುತ್ತದೆ.* ಯುಪಿಯಲ್ಲಿ ಮೊದಲ ಖಾಸಗಿ ನಿರ್ವಹಿತ ರೈಲು ನಿಲ್ದಾಣವಾಗಿ ಲಕ್ನೋದ ಗೋಮತಿ ನಗರ ಸ್ಥಾನ ಪಡೆದಿದೆ. ಇಲ್ಲಿ ದಿನಕ್ಕೆ 76 ರೈಲುಗಳು 6 ಪ್ಲಾಟ್ಫಾರ್ಮ್ಗಳ ಮೂಲಕ ಸಂಚರಿಸುತ್ತವೆ.* ಭಾರತೀಯ ರೈಲ್ವೆ ಟಿಕೆಟ್ ಮಾರಾಟ, ರೈಲು ನಿರ್ವಹಣೆ ಮತ್ತು ಸುರಕ್ಷತೆಗೆ ಹೊಣೆ. ಖಾಸಗಿ ಸಂಸ್ಥೆಗಳು ಸ್ವಚ್ಛತೆ, ಪಾರ್ಕಿಂಗ್, ಆವರಣದ ಭದ್ರತೆ ಹಾಗೂ ಇತರ ಸೌಲಭ್ಯಗಳನ್ನು ನಿರ್ವಹಿಸುತ್ತವೆ.* ಖಾಸಗಿ ನಿರ್ವಾಹಕರಿಗೆ ಮೊದಲು 3 ವರ್ಷ ನವೀಕರಣಕ್ಕೆ, ನಂತರ 9 ವರ್ಷ ನಿರ್ವಹಣೆಗೆ ಅವಕಾಶವಿದೆ. ಈ ಯೋಜನೆಯ ಆದಾಯದ 15% RLDA ಗೆ ಮತ್ತು 85% ಭಾರತೀಯ ರೈಲ್ವೆಗೆ ಸೇರಲಿದೆ.* ಪ್ರಧಾನಿ ನರೇಂದ್ರ ಮೋದಿ ಅವರು ನವೀಕರಿಸಿದ ಗೋಮತಿ ನಗರ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಈ ಖಾಸಗೀಕರಣ ಪ್ರಯತ್ನವು ದೇಶದ ಇತರ ನಿಲ್ದಾಣಗಳ ಸೌಲಭ್ಯಗಳ ನವೀಕರಣಕ್ಕೆ ಮಾದರಿಯಾಗುತ್ತಿದೆ.* ಪ್ರಯಾಣಿಕರು ಇಂದಿನಿಂದ ಸ್ವಚ್ಛತೆ, ಸುಧಾರಿತ ಸೌಕರ್ಯಗಳು, ಭದ್ರತೆ ಮತ್ತು ಆರಾಮದಾಯಕ ಅನುಭವವನ್ನು ಅನುಭವಿಸಬಹುದು.