* ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿರುವ 'ಶೂನ್ಯ ಬಡತನ' ಯೋಜನೆಯಡಿ ಮೊದಲ ಫಲಾನುಭವಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ಲಕ್ನೋದ ರೂಬಿ ಎಂಬ ಮಹಿಳೆಯ ಕುಟುಂಬ ಮೊದಲ ಫಲಾನುಭವಿಯಾಗಿದೆ.* ಮುಖ್ಯಮಂತ್ರಿ ಆದಿತ್ಯನಾಥ್ ಶೂನ್ಯ ಬಡತನ ಯೋಜನೆಯನ್ನು ರಾಜ್ಯದ ಅತಿ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಆರ್ಥಿಕ ಬಲಪಡಿಸಲು ಜಾರಿಗೆ ತಂದರು.* ಈ ಯೋಜನೆಯ ಮೂಲಕ ಸರ್ಕಾರ 25 ಲಕ್ಷ ಕುಟುಂಬವನ್ನು ಗುರುತಿಸಿ ಬಲ ನೀಡುವ ಗುರಿಯನ್ನು ಹೊಂದಿದೆ.* ಗುರುತಿಸಲಾದ ಕುಟುಂಬಗಳ ವಾರ್ಷಿಕ ಆದಾಯವು 1.25 ಲಕ್ಷ ದಾಟುವಂಥ ಉದ್ಯೋಗವನ್ನು ನೀಡಲಾಗುತ್ತದೆ. ಯೋಜನೆಯ ಅಡಿಯಲ್ಲಿ ಉದ್ಯೋಗ ಪಡೆದ ಮೊದಲ ವ್ಯಕ್ತಿ ರೂಬಿ ಅವರ ಪತಿ ರಾಮ್ಸಾಗರ್ ಆಗಿದ್ದಾರೆ. ರಾಮ್ ಸಾಗರ್ ಹಿಂದುಜಾ ಗ್ರೂಪ್ ನಿಂದ ನೇಮಕಾತಿ ಪತ್ರವನ್ನು ಸ್ವೀಕರಿಸಿದ್ದು, ಅಶೋಕ್ ಲೇಲ್ಯಾಂಡ್ನಲ್ಲಿ ಕೆಲಸ ಮಾಡಲಿದ್ದಾರೆ.* ಸರಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಅವರು ಲಕ್ಕೋದ ಗೋಸಾಯಿಗಂಜ್ನ ಸಿಲೌಲಿ ಗ್ರಾಮದ ರೂಬಿ ಅವರ ಕುಟುಂಬವನ್ನು ಆಯ್ಕೆ ಮಾಡಿದ್ದರು.* ಹಿಂದುಜಾ ಕಂಪನಿಯ ಹೇಳಿಕೆಯಂತೆ, ಈ ರಾಮ್ಸಾಗರ್ ಅವರಿಗೆ ಈಗಾಗಲೇ ಅವರ ತರಬೇತಿ ಆರಂಭವಾಗಿದ್ದು, ಒಂದು ವರ್ಷದ ತರಬೇತಿನ್ನು ನೀಡಲಾಗುತ್ತದೆ.* ಅಶೋಕ್ ಲೇಲ್ಯಾಂಡ್ ನಲಕ್ಕೋದ ಯೋಜನಾ ಮುಖ್ಯಸ್ಥ ಶಕ್ತಿ ಸಿಂಗ್, ಉತ್ತರ ಪ್ರದೇಶದ ಯುವಕರಿಗೆ 12 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಹೇಳಿದ್ದಾರೆ.