* ಉತ್ತರ ಲಾಸ್ ಏಂಜಲೀಸ್ನಲ್ಲಿ ಮತ್ತೆ ಕಾಡ್ಗಿಚ್ಚು ಉಲ್ಬಣಿಸಿದ್ದು 8000 ಎಕರೆಗೂ ಹೆಚ್ಚು ವ್ಯಾಪ್ತಿಯಲ್ಲಿ ಆವರಿಸಿದೆ. ಇದರ ಪರಿಣಾಮ 19 ಸಾವಿರಕ್ಕೂ ಹೆಚ್ಚು ಜನರನ್ನು ತಕ್ಷಣ ಸ್ಥಳಾಂತರಕ್ಕೆ ಅಧಿಕಾರಿಗಳು ಆದೇಶಿಸಿದ್ದಾರೆ.* ಲಾಸ್ ಏಂಜಲೀಸ್ನ ಉತ್ತರಕ್ಕೆ 35 ಮೈಲಿ ದೂರದಲ್ಲಿರುವ ಸಾಂಟಾ ಕ್ಲಾರಿಟಾ ಬಳಿಯ ಸರೋವರದ ಸುತ್ತಮುತ್ತಲಿನ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ.* ಬೆಂಕಿ ಇನ್ನಷ್ಟು ವ್ಯಾಪಿಸಿದರೆ 16,000 ಜನರನ್ನು ಸ್ಥಳಾಂತರಿಸುವ ಅವಶ್ಯವಿದೆ ಎಂದು ಲಾಸ್ ಏಂಜಲೀಸ್ನ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.* ಸ್ಥಳದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಒಂದು ಸಾವಿರಕ್ಕೂ ಅಧಿಕ ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ.* ಒಂಬತ್ತು ತಿಂಗಳಿನಿಂದ ಕ್ಯಾಲಿಫೋರ್ನಿಯಾದಲ್ಲಿ ಮಳೆ ಸುರಿದಿಲ್ಲ. ಮುಂದಿನ ಮೂರು ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.* ಪ್ರದೇಶದಲ್ಲಿ ಬೀಸುತ್ತಿರುವ ಬಲವಾದ ಶುಷ್ಕ ಗಾಳಿಯು ಬೆಂಕಿಯನ್ನು ಹೆಚ್ಚಿಸುತ್ತಿದೆ ಎಂದು ವರದಿ ಹೇಳಿದೆ.* ಜನವರಿ 7 ರಿಂದ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನಲ್ಲಿ ಈವರೆಗೂ ಕನಿಷ್ಠ 28 ಮಂದಿ ಸಾವನ್ನಪ್ಪಿದ್ದಾರೆ. 22 ಮಂದಿ ನಾಪತ್ತೆಯಾಗಿದ್ದಾರೆ. 14 ಸಾವಿರಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ.