Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಉತ್ತರ ಪ್ರದೇಶ ಬಜೆಟ್ 2026-27: ₹9.13 ಲಕ್ಷ ಕೋಟಿಯ ಐತಿಹಾಸಿಕ ಆರ್ಥಿಕ ನೀಲನಕ್ಷೆ ಮಂಡಿಸಿದ ಸುರೇಶ್ ಖನ್ನಾ
Authored by:
Akshata Halli
Date:
12 ಫೆಬ್ರುವರಿ 2026
➤ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ ಅವರು
ಫೆಬ್ರವರಿ 11, 2026
ರಂದು ವಿಧಾನಸಭೆಯಲ್ಲಿ ರಾಜ್ಯದ ಅತಿದೊಡ್ಡ ಬಜೆಟ್ ಅನ್ನು ಮಂಡಿಸಿದರು.
₹9,12,696.35 ಕೋಟಿ
(ಸುಮಾರು ₹9.13 ಲಕ್ಷ ಕೋಟಿ) ಮೊತ್ತದ ಈ ಬಜೆಟ್, ಉತ್ತರ ಪ್ರದೇಶವನ್ನು $1 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಮಂಡಿಸಿದ ಈ ಬಜೆಟ್ ಕಳೆದ ವರ್ಷಕ್ಕಿಂತ
12.2% ರಷ್ಟು ದೊಡ್ಡದಾಗಿದೆ
.
➤ 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ವಿತ್ತೀಯ ಕೊರತೆಯನ್ನು 2030-31ರವರೆಗೆ ಶೇಕಡಾ 3ಕ್ಕೆ ಸೀಮಿತಗೊಳಿಸುವ ಮೂಲಕ ಆರ್ಥಿಕ ಶಿಸ್ತಿಗೆ ಒತ್ತು ನೀಡಲಾಗಿದ್ದು, ಒಟ್ಟು ಬಜೆಟ್ ಮೊತ್ತದ ಶೇಕಡಾ 19.5 ರಷ್ಟನ್ನು ಅಭಿವೃದ್ಧಿ ಕೆಲಸಗಳಿಗಾಗಿ ಅಂದರೆ ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ ಮತ್ತು ರಾಜ್ಯದ ತಲಾ ಆದಾಯವು 2025-26ರಲ್ಲಿ ₹1,20,000ಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ.
➤
ಸರ್ಕಾರವು ಶಿಕ್ಷಣ ಮತ್ತು ಕೃಷಿಗೆ ಅತಿ ಹೆಚ್ಚಿನ ಆದ್ಯತೆ ನೀಡಿದೆ:
ಶಿಕ್ಷಣ - 12.4% - ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್ಗಳ ನಿರ್ಮಾಣ.
ಕೃಷಿ - 9% - UP-AGREES ಯೋಜನೆಯಡಿ ಕೃಷಿ ರಫ್ತು ಹಬ್ ಸ್ಥಾಪನೆ.
ಆರೋಗ್ಯ - 6% - ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಮತ್ತು ಟ್ರಾಮಾ ಸೆಂಟರ್ ಸ್ಥಾಪನೆ.
➤
ರೈತರಿಗಾಗಿ ಹೊಸ ಯೋಜನೆ: UP-AGREES:
ವಿಶ್ವಬ್ಯಾಂಕ್ ನೆರವಿನೊಂದಿಗೆ ಘೋಷಿಸಲಾಗಿರುವ 'UP-AGREES' ಯೋಜನೆಯಡಿ ಕೃಷಿ ರಫ್ತು ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ರೈತರಿಗೆ ಜಾಗತಿಕ ಮಾರುಕಟ್ಟೆಯ ಸಂಪರ್ಕ ಕಲ್ಪಿಸಿ ಅವರ ಆದಾಯವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.
➤ ಯುವಜನರಿಗೆ ಉದ್ಯೋಗ ನೀಡಲು "ಮಿಷನ್ ಮೋಡ್" ಕೌಶಲ್ಯ ತರಬೇತಿಯನ್ನು ಘೋಷಿಸಿರುವ ಈ ಬಜೆಟ್ನಲ್ಲಿ 10 ಲಕ್ಷ ಉದ್ಯೋಗಾವಕಾಶಗಳ ಸೃಜನೆಯ ಗುರಿ ಹೊಂದಲಾಗಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (PPP) ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸುವ ಜೊತೆಗೆ ಸುಮಾರು 50 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ಫೋನ್ ವಿತರಿಸುವ ಮೂಲಕ ಡಿಜಿಟಲ್ ಕ್ರಾಂತಿಗೆ ನಾಂದಿ ಹಾಡಲಾಗಿದೆ.
➤ ಮೂಲಸೌಕರ್ಯ ಮತ್ತು ಸಂಪರ್ಕ ವಲಯಕ್ಕೆ ಉತ್ತೇಜನ ನೀಡಲು ದೆಹಲಿ-ವಾರಣಾಸಿ ಹಾಗೂ ವಾರಣಾಸಿ-ಸಿಲಿಗುರಿ ನಡುವೆ ಹೈ-ಸ್ಪೀಡ್ ರೈಲು ಸಂಪರ್ಕ ಕಲ್ಪಿಸಲಾಗುತ್ತಿದ್ದು, ಸಾರನಾಥ ಮತ್ತು ಹಸ್ತಿನಾಪುರಗಳನ್ನು ಅಂತರಾಷ್ಟ್ರೀಯ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಕೇಂದ್ರದೊಂದಿಗೆ ಸಹಯೋಗ ಹೊಂದುವ ಜೊತೆಗೆ ಗಂಗಾ ಮತ್ತು ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇ ಯೋಜನೆಗಳಿಗೆ ಹೆಚ್ಚಿನ ಧನಸಹಾಯವನ್ನು ಒದಗಿಸಲಾಗಿದೆ.
➤
ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಕಲ್ಯಾಣ:
-
ಮುಖ್ಯಮಂತ್ರಿ ಸಮೂಹ ವಿವಾಹ ಯೋಜನೆ:
ಕನ್ಯಾದಾನ ಸಹಾಯಧನವನ್ನು ₹51,000 ದಿಂದ
₹1.01 ಲಕ್ಷಕ್ಕೆ
ಏರಿಕೆ.
-
ಮಹಿಳಾ ಬೀಟ್ ಆಫೀಸರ್:
'ಮಿಷನ್ ಶಕ್ತಿ' ಅಡಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ವಾಹನಗಳ ಖರೀದಿಗೆ ₹25 ಕೋಟಿ ಮೀಸಲು.
Take Quiz
Loading...