* ನ್ಯೂಯಾರ್ಕ್ನಲ್ಲಿ ನಡೆದ ಯುಎಸ್ ಓಪನ್ ಫೈನಲ್ನಲ್ಲಿ ಬೆಲಾರುಸ್ನ ವಿಶ್ವ ನಂ.1 ಆಟಗಾರ್ತಿ ಅರೈನಾ ಸಬಲೆಂಕಾ ಸತತ 2ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.* 27 ವರ್ಷದ ಸಬಲೆಂಕಾ ಅಮೆರಿಕದ ಅಮಾಂಡ ಅನಿಸಿಮೋವಾ ಅವರನ್ನು 6-3, 7-6(7/3) ಅಂಕಗಳಲ್ಲಿ ಮಣಿಸಿದರು.* ಇದರೊಂದಿಗೆ ಸಬಲೆಂಕಾ ಒಟ್ಟಾರೆ 4ನೇ ಗ್ರ್ಯಾನ್ಸ್ಲಾಂ ಕಿರೀಟವನ್ನು ಗೆದ್ದಿದ್ದಾರೆ. ಅವರು 2023, 2024ರಲ್ಲಿ ಆಸ್ಟ್ರೇಲಿಯನ್ ಓಪನ್ ಹಾಗೂ 2024, 2025ರಲ್ಲಿ ಯುಎಸ್ ಓಪನ್ ಗೆದ್ದಿದ್ದಾರೆ. ಈ ವರ್ಷ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಫೈನಲ್ಗೂ ತಲುಪಿದ್ದರು.* ಅಮಾಂಡ ಅನಿಸಿಮೋವಾ ತಮ್ಮ 2ನೇ ಗ್ರ್ಯಾನ್ಸ್ಲಾಂ ಫೈನಲ್ ಸೋತಿದ್ದಾರೆ. ಇತ್ತೀಚೆಗಷ್ಟೇ ವಿಂಬಲ್ಡನ್ನಲ್ಲಿ ಇಗಾ ಸ್ವಿಯಾಟೆಕ್ ವಿರುದ್ಧ ಸೋತಿದ್ದ ಅವರು, ಈ ಬಾರಿ ಸಬಲೆಂಕಾ ವಿರುದ್ಧ ಸೋತು ಚೊಚ್ಚಲ ಗ್ರ್ಯಾನ್ಸ್ಲಾಂ ಕನಸು ಸಾಧಿಸಲು ವಿಫಲರಾದರು.* 11 ವರ್ಷಗಳ ಬಳಿಕ ಯುಎಸ್ ಓಪನ್ನಲ್ಲಿ ಸತತ 2 ವರ್ಷ ಗೆಲ್ಲುವ ಸಾಧನೆ ಮಾಡಿದ ಆಟಗಾರ್ತಿ ಸಬಲೆಂಕಾ. ಈ ಹಿಂದೆ 2012-14ರ ಅವಧಿಯಲ್ಲಿ ಸೆರೆನಾ ವಿಲಿಯಮ್ಸ್ ಮಾತ್ರ ಸತತವಾಗಿ ಟ್ರೋಫಿ ಪಡೆದಿದ್ದರು.* ಚಾಂಪಿಯನ್ ಸಬಲೆಂಕಾಗೆ ₹44 ಕೋಟಿ ನಗದು ಬಹುಮಾನ ಲಭಿಸಿತು. ರನ್ನರ್-ಅಪ್ ಅಮಾಂಡ ₹22 ಕೋಟಿ ಬಹುಮಾನ ಪಡೆದರು.