* ಕೇಂದ್ರ ಸರಕಾರ ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು 'ಭೀಮ್' ಯುಪಿಐ ವಹಿವಾಟುಗಳ ಪ್ರೋತ್ಸಾಹಧನ ಮುಂದುವರಿಸಲು ಕೇಂದ್ರ ನಿರ್ಧರಿಸಿದೆ. 2000ರೂ. ವರೆಗಿನ ವಹಿವಾಟುಗಳಿಗೆ ಇದು ಅನ್ವಯಿಸಲಿದೆ.* ಕೇಂದ್ರ ಸರ್ಕಾರದ ಉಪಕ್ರಮದಿಂದ, ಯುಪಿಐ ಬಳಕೆದಾರರು (ಸಾಮಾನ್ಯ ಗ್ರಾಹಕರು) 2,000 ರೂ.ವರೆಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಡಿಜಿಟಲ್ ಪಾವತಿ ಮೂಲಕ ವಹಿವಾಟು ನಡೆಸಬಹುದು.* ಏಪ್ರಿಲ್ 1, 2024 ರಿಂದ ಮಾರ್ಚ್ 31, 2025 ರವರೆಗೆ ಒಂದು ವರ್ಷ ಕಾರ್ಯನಿರ್ವಹಿಸಲಿದ್ದು, ಈ ಯೋಜನೆ ಮುಂದಿನ ವರ್ಷವೂ ಮುಂದುವರಿಯುವಂತೆ ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ.* ಸಣ್ಣ ವ್ಯಾಪಾರಿಗಳ ಮೇಲಿನ ಹೊರೆಯೂ ಕಡಿಮೆಯಾಗಲಿದೆ. “ಯುಪಿಐ ವ್ಯವಸ್ಥೆಯಲ್ಲಿ ವಿವಿಧ ಪಾಲುದಾರರ (ಸಣ್ಣ ವ್ಯಾಪಾರಿಗಳು) ವೆಚ್ಚವನ್ನು ಕಡಿಮೆ ಮಾಡಲು 1,500 ಕೋಟಿ ರೂ.ಗಳ ಪ್ರೋತ್ಸಾಹ ಧನ ಯೋಜನೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.* ಸಣ್ಣ ವ್ಯಾಪಾರಿಗಳು UPI ಪಾವತಿಗಳನ್ನು ಅಂಗೀಕರಿಸಿದರೆ ಪ್ರತಿಯೊಬ್ಬ ವ್ಯವಹಾರದ ಮೇಲೆ 0.15% ಪ್ರೋತ್ಸಾಹ ದೊರೆಯುತ್ತದೆ. ಸರ್ಕಾರದ ಡಿಜಿಟಲ್ ಪಾವತಿ ವಿವರಗಳು 2021-22 ರಿಂದ 2023-24 ರವರೆಗೆ ಗರಿಷ್ಠ ವೇಗದಲ್ಲಿ ಬೆಳವಣಿಗೆಯಾಗಿದೆ.