Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಉನ್ನತ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ: ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ–2025
19 ಡಿಸೆಂಬರ್ 2025
* ಕೇಂದ್ರ ಸರ್ಕಾರವು
ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ–2025
ನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ಇದು ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸಬಲಗೊಳಿಸುವ ಉದ್ದೇಶ ಹೊಂದಿದೆ. ಈ ಮಸೂದೆ
ರಾಷ್ಟ್ರೀಯ ಶಿಕ್ಷಣ ನೀತಿ–2020 (NEP 2020)
ಆಧಾರಿತವಾಗಿದ್ದು, ಉನ್ನತ ಶಿಕ್ಷಣದ ನಿಯಂತ್ರಣ ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆ ತರಲು ಉದ್ದೇಶಿಸಿದೆ.
* ಈ ಮಸೂದೆ ಮೂಲಕ ಪ್ರಸ್ತುತ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ
ವಿಶ್ವವಿದ್ಯಾಲಯ ಅನುದಾನ ಆಯೋಗ (UGC), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಹಾಗೂ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (NCTE)
ಮುಂತಾದ ವಿವಿಧ ನಿಯಂತ್ರಣ ಸಂಸ್ಥೆಗಳನ್ನು ರದ್ದುಪಡಿಸಿ, ಅವುಗಳ ಬದಲು
ಒಂದೇ ‘ಛತ್ರ ಸಂಸ್ಥೆ’ (Umbrella Commission)
ಅನ್ನು ಸ್ಥಾಪಿಸುವ ಪ್ರಸ್ತಾವನೆ ಮಾಡಲಾಗಿದೆ.
*ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ (VBSA) ಮಸೂದೆಯ ಪ್ರಮುಖ ಉದ್ದೇಶಗಳು :--
=> ಒಂದೇ ಛತ್ರ ನಿಯಂತ್ರಣ ಸಂಸ್ಥೆ :
ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ
ಅತಿನಿಯಂತ್ರಣ, ನಿಯಮಗಳ ಪುನರಾವೃತ್ತಿ ಮತ್ತು ಗೊಂದಲಗಳನ್ನು ನಿವಾರಿಸಲು
ಒಂದೇ ಕೇಂದ್ರ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸುವುದು ಈ ಮಸೂದೆಯ ಪ್ರಮುಖ ಗುರಿಯಾಗಿದೆ.
=> ತಂತ್ರಜ್ಞಾನ ಆಧಾರಿತ ಏಕವಿಂಡೋ ವ್ಯವಸ್ಥೆ:
ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ
ತಂತ್ರಜ್ಞಾನ ಚಾಲಿತ, ಏಕವಿಂಡೋ (Single Window) ಸಂವಾದಾತ್ಮಕ ವ್ಯವಸ್ಥೆ
ರೂಪಿಸಲಾಗುತ್ತದೆ. ಈ ವ್ಯವಸ್ಥೆ
ಸಾರ್ವಜನಿಕ ಸ್ವಯಂ-ಬಹಿರಂಗಪಡಿಸುವಿಕೆ (Public Self-Disclosure)
ತತ್ವದ ಮೇಲೆ ಆಧಾರಿತವಾಗಿರುತ್ತದೆ.
=>
ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಗಳ ಸ್ಥಾಪನೆ :
ಅಂತರರಾಷ್ಟ್ರೀಯ ಮಾನದಂಡಗಳಿಗೆ ತಕ್ಕಂತೆ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಉತ್ತೇಜನ ನೀಡುವುದು ಹಾಗೂ
ಒಟ್ಟು ದಾಖಲಾತಿ ಅನುಪಾತ (GER – Gross Enrolment Ratio)
ಹೆಚ್ಚಿಸುವುದು ಇದರ ಪ್ರಮುಖ ಗುರಿಯಾಗಿದೆ.
=> ಉನ್ನತ ಕಾರ್ಯಕ್ಷಮ ಸಂಸ್ಥೆಗಳಿಗೆ ಹೆಚ್ಚಿದ ಸ್ವಾಯತ್ತತೆ :
ಉತ್ತಮ ಸಾಧನೆ ಮಾಡುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿದ ಸ್ವಾಯತ್ತತೆ ನೀಡುವುದರಿಂದ,
ಸಂಶೋಧನೆ, ಹೊಸ ಆವಿಷ್ಕಾರಗಳು ಹಾಗೂ ಶೈಕ್ಷಣಿಕ ಗುಣಮಟ್ಟ
ವನ್ನು ಮತ್ತಷ್ಟು ಬಲಪಡಿಸಿ, ಜಾಗತಿಕ ಮಟ್ಟದ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಧಿಸಲು ಅಗತ್ಯವಾದ ಸ್ವತಂತ್ರತೆ ಮತ್ತು ಪ್ರೋತ್ಸಾಹ ದೊರೆಯುತ್ತದೆ.
=> ವಿದ್ಯಾರ್ಥಿ ಕೇಂದ್ರಿತ ಮತ್ತು ಸಮಗ್ರ ಶಿಕ್ಷಣ ಸುಧಾರಣೆ :
ಈ ಮಸೂದೆ ವಿದ್ಯಾರ್ಥಿ ಕೇಂದ್ರಿತ, ಸಮಗ್ರ ಹಾಗೂ ಕೌಶಲ್ಯಾಧಾರಿತ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡುತ್ತಿದ್ದು,
ಶಿಕ್ಷಣದ ವ್ಯಾಪ್ತಿಯನ್ನು ವಿಸ್ತರಿಸುವುದು, ಒಟ್ಟು ದಾಖಲಾತಿ ಅನುಪಾತ (GER) ಹೆಚ್ಚಿಸುವುದು ಮತ್ತು ಭವಿಷ್ಯಕ್ಕೆ ತಯಾರಾದ ನೈಪುಣ್ಯಯುತ ಯುವಜನರನ್ನು ರೂಪಿಸುವುದು
ಇದರ ಪ್ರಮುಖ ಉದ್ದೇಶಗಳಾಗಿವೆ.
* ಸಾರ್ವಜನಿಕ ಪೋರ್ಟಲ್ ಮತ್ತು ಪಾರದರ್ಶಕತೆ :
ಈ ಮಸೂದೆ ಅಡಿಯಲ್ಲಿ
ಒಂದು ಸಾರ್ವಜನಿಕ ಡಿಜಿಟಲ್ ಪೋರ್ಟಲ್
ಸ್ಥಾಪಿಸಲಾಗುತ್ತದೆ.ಈ ಪೋರ್ಟಲ್ನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಕೆಳಗಿನ ಎಲ್ಲಾ ಮಾಹಿತಿಗಳನ್ನು ಕಡ್ಡಾಯವಾಗಿ ವರದಿ ಮಾಡಬೇಕು:
- ಹಣಕಾಸಿನ ಪಾರದರ್ಶಕತೆ (Financial Probity)
- ಉತ್ತಮ ಆಡಳಿತ (Good Governance)
- ಸಂಪೂರ್ಣ ಹಣಕಾಸು ವಿವರಗಳು ಮತ್ತು ಲೆಕ್ಕಪತ್ರಗಳು
- ಆಡಿಟ್ ವರದಿಗಳು ಮತ್ತು ಕಾರ್ಯವಿಧಾನಗಳು
- ಮೂಲಸೌಕರ್ಯ ಸೌಲಭ್ಯಗಳು
- ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿವರಗಳು
- ಕೋರ್ಸ್ಗಳು ಮತ್ತು ಪಠ್ಯಕ್ರಮಗಳು
- ಶಿಕ್ಷಣ ಫಲಿತಾಂಶಗಳು ಮತ್ತು ಸಾಧನೆಗಳು
ಇದರಿಂದ
ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಗುಣಮಟ್ಟ
ಹೆಚ್ಚಾಗಿ, ಸಾರ್ವಜನಿಕ ನಂಬಿಕೆ ಮತ್ತಷ್ಟು ಬಲವಾಗಲಿದೆ.
*
ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ–2025
ಭಾರತದ ಉನ್ನತ ಶಿಕ್ಷಣ ಕ್ಷೇತ್ರವನ್ನು ಸರಳ, ಪಾರದರ್ಶಕ, ತಂತ್ರಜ್ಞಾನಾಧಾರಿತ ಮತ್ತು ಜಾಗತಿಕ ಮಟ್ಟಕ್ಕೆ ತರುವ ದೀರ್ಘಕಾಲೀನ ಸುಧಾರಣೆಯಾಗಿ ಪರಿಗಣಿಸಲಾಗಿದೆ.
Take Quiz
Loading...