Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಜೀವ ಉಳಿಸುವ 'ಜಾದು': ಯುದ್ಧದ ನಡುವೆ ಗಾಯಾಳು ಸೈನಿಕರನ್ನು ರಕ್ಷಿಸಲು ಐಎಎಫ್ಗೆ ಬರಲಿದೆ ಹೈಟೆಕ್ ವಿಮಾನ
Authored by:
Basavaraj Halli
Date:
11 ಎಪ್ರಿಲ್ 2026
➤ ಭಾರತೀಯ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗುತ್ತಿದೆ. ಶತ್ರುಪಡೆಗಳ ನಡುವೆ ಅಥವಾ ದುರ್ಗಮ ಗುಡ್ಡಗಾಡು ಪ್ರದೇಶಗಳಲ್ಲಿ ಸಿಲುಕಿರುವ ಸೈನಿಕರನ್ನು ಸುರಕ್ಷಿತವಾಗಿ ರಕ್ಷಿಸಲು
ಮಾನವರಹಿತ ಕಾಂಬ್ಯಾಟ್ ಸರ್ಚ್ ಅಂಡ್ ರೆಸ್ಕ್ಯೂ (Unmanned CSAR)
ವಿಮಾನವನ್ನು ವಿನ್ಯಾಸಗೊಳಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಡಿ ನಿರ್ಮಾಣವಾಗಲಿರುವ ಈ ವಿಮಾನವು ಯುದ್ಧಭೂಮಿಯಲ್ಲಿ ಭಾರತೀಯ ವಾಯುಪಡೆಯ (IAF) ಸಾಮರ್ಥ್ಯವನ್ನು ಹತ್ತಾರು ಪಟ್ಟು ಹೆಚ್ಚಿಸಲಿದೆ.
➤
ಮಾನವರಹಿತ ರಕ್ಷಣಾ ವಿಮಾನ:
ಸಾಮಾನ್ಯವಾಗಿ ಯುದ್ಧದ ಸಮಯದಲ್ಲಿ ಸೈನಿಕರು ಗಾಯಗೊಂಡಾಗ ಅಥವಾ ಶತ್ರುಗಳ ವಶವಾದಾಗ ಅವರನ್ನು ರಕ್ಷಿಸಲು ಹೆಲಿಕಾಪ್ಟರ್ಗಳನ್ನು ಬಳಸಲಾಗುತ್ತದೆ. ಆದರೆ, ಶತ್ರುಗಳ ಕ್ಷಿಪಣಿ ದಾಳಿಯ ಭೀತಿ ಇರುವ ಕಡೆಗಳಲ್ಲಿ ಹೆಲಿಕಾಪ್ಟರ್ ಕಳುಹಿಸುವುದು ಅಪಾಯಕಾರಿ. ಅಂತಹ ಸಂದರ್ಭಗಳಲ್ಲಿ, ಯಾವುದೇ ಪೈಲಟ್ ಇಲ್ಲದೆ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಈ
'ಡ್ರೋನ್ ವಿಮಾನ'
ಸಂಜೀವಿನಿಯಂತೆ ಕೆಲಸ ಮಾಡಲಿದೆ.
➤
ಈ ವಿಮಾನದ ಪ್ರಮುಖ ವೈಶಿಷ್ಟ್ಯಗಳು:
- ಹೊರುವ ಸಾಮರ್ಥ್ಯ:
ಕನಿಷ್ಠ 400 ಕೆಜಿ ತೂಕ (4 ಪ್ರಯಾಣಿಕರು ಅಥವಾ ಸ್ಟ್ರೆಚರ್ಗಳ ವ್ಯವಸ್ಥೆ)
- ಕಾರ್ಯನಿರ್ವಹಿಸುವ ಎತ್ತರ:
ಸಮುದ್ರ ಮಟ್ಟದಿಂದ 16,000 ಅಡಿ (ಅಗತ್ಯಬಿದ್ದಲ್ಲಿ 20,000 ಅಡಿವರೆಗೆ)
- ವ್ಯಾಪ್ತಿ (Range):
ಕನಿಷ್ಠ 200 ಕಿಲೋಮೀಟರ್ಗಳವರೆಗೆ ಹಾರಾಟ
- ತಂತ್ರಜ್ಞಾನ:
ಸ್ಯಾಟಲೈಟ್ ಸಂಪರ್ಕವಿಲ್ಲದಿದ್ದರೂ ಸ್ವಯಂಚಾಲಿತ ಹಾರಾಟ ನಡೆಸುವ ಸಾಮರ್ಥ್ಯ
- ವಿಶೇಷತೆ:
ಎಮರ್ಜೆನ್ಸಿ ಲೊಕೇಟರ್ ಟ್ರಾನ್ಸ್ಮಿಟರ್ (ELT) ಮೂಲಕ ಸಂಕಷ್ಟದಲ್ಲಿರುವವರ ಪತ್ತೆ
➤ ಹಿಮಾವೃತ ಪರ್ವತಗಳು ಹಾಗೂ ಕಡಿದಾದ ಹಾದಿಗಳಲ್ಲಿ ಹಾರಾಟ ನಡೆಸಲು ಹೆಲಿಕಾಪ್ಟರ್ಗಳು ಪರದಾಡುವ ದುರ್ಗಮ ಪ್ರದೇಶಗಳಲ್ಲಿ ಈ ಮಾನವರಹಿತ ವಿಮಾನವು ವರವಾಗಲಿದೆ. ಲಡಾಖ್ ಮತ್ತು ಅರುಣಾಚಲ ಪ್ರದೇಶದಂತಹ ಎತ್ತರದ ಪ್ರದೇಶಗಳಲ್ಲಿ ಸಲೀಸಾಗಿ ಸಂಚರಿಸಬಲ್ಲ ಇದು, ರನ್ವೇಗಳ ಅಗತ್ಯವಿಲ್ಲದೆಯೇ ಸ್ವಯಂಚಾಲಿತವಾಗಿ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಮಾಡುವ ಸಾಮರ್ಥ್ಯ ಹೊಂದಿದೆ. ಗಡಿ ಭಾಗದ ಸೈನಿಕರಿಗೆ ತುರ್ತು ಅಗತ್ಯ ವಸ್ತುಗಳನ್ನು ಪೂರೈಸಲು ಮತ್ತು ಸಂಕಷ್ಟದಲ್ಲಿರುವವರನ್ನು ರಕ್ಷಿಸಲು ಈ ಸುಧಾರಿತ ತಂತ್ರಜ್ಞಾನವು ಭಾರತೀಯ ಸೇನೆಗೆ ಹೆಚ್ಚಿನ ಬಲ ತುಂಬಲಿದೆ.
Take Quiz
Loading...