* ವಿಶ್ವಸಂಸ್ಥೆಯ ಕಾರ್ಯದಕ್ಷತೆಯನ್ನು ಸುಧಾರಿಸಿ ಮತ್ತಷ್ಟು ಪರಿಣಾಮಕಾರಿಯಾಗಿಸಲು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಯುಎನ್80 ಎಂಬ ಉಪಕ್ರಮವನ್ನು ಘೋಷಿಸಿದ್ದಾರೆ.* "ಅನಿಶ್ಚಿತತೆ ಮತ್ತು ಅನಿರೀಕ್ಷಿತತೆಯ" ವಾತಾವರಣದ ನಡುವೆ ಕುಗ್ಗುತ್ತಿರುವ ಸಂಪನ್ಮೂಲಗಳು ಮತ್ತು ದ್ರವ್ಯತೆ ಬಿಕ್ಕಟ್ಟಿನ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.* ಇತ್ತೀಚೆಗೆ ಸದಸ್ಯ ರಾಷ್ಟ್ರಗಳ ಸಂಖ್ಯೆ ಹೆಚ್ಚುತ್ತಿದ್ದು, ಅವರ ಸಲಹೆಗಳನ್ನು ಪರಿಶೀಲಿಸಿ, ವಿಶ್ವಸಂಸ್ಥೆಯ ಅಭಿವೃದ್ಧಿಗೆ ತಕ್ಕ ಬದಲಾವಣೆಗಳನ್ನು ಅಳವಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.* ನಮ್ಮ ಜಗತ್ತು ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದು, ಅದು ವಿಶ್ವಸಂಸ್ಥೆಯ ಕಾರ್ಯವೈಖರಿಗೂ ಪ್ರಭಾವ ಬೀರುತ್ತದೆ. ಈ ಅನಿಶ್ಚಿತತೆ ನಿವಾರಿಸಲು ಯುಎನ್80 ಅಗತ್ಯವಿದೆ.ಈ ಉಪಕ್ರಮದ ಸಮರ್ಪಕ ಜಾರಿಗಾಗಿ ಆಂತರಿಕ ಕಾರ್ಯಪಡೆಯನ್ನೂ ನೇಮಿಸಲಾಗಿದೆ. * "ವಿಶ್ವಸಂಸ್ಥೆಯ ಸಂಪನ್ಮೂಲಗಳು ಸತತ ಏಳು ವರ್ಷಗಳಿಂದ ಕಡಿಮೆಯಾಗಿದ್ದು, ಸದಸ್ಯ ರಾಷ್ಟ್ರಗಳು ಪಾವತಿ ವಿಳಂಬ ಮಾಡುತ್ತಿರುವುದೇ ಕಾರಣ. 80 ವರ್ಷಗಳಾದ ಹಿನ್ನೆಲೆಯಲ್ಲಿ, ಸಂಸ್ಥೆಯ ಸಂಕೀರ್ಣ ವ್ಯವಸ್ಥೆ ಸುಧಾರಣೆಗಾಗಿ ಇದು ಸಕಾಲ. ಅದಕ್ಕಾಗಿ ನಿಯಮಿತ ಪರಿಶೀಲನೆ ಅಗತ್ಯವೆಂದು ಅವರು ಹೇಳಿದ್ದಾರೆ.
ಪ್ರಮುಖ ಗುರಿ: 80 ವರ್ಷ ಹಳೆಯ ವಿಶ್ವಸಂಸ್ಥೆಯನ್ನು ಹೆಚ್ಚು ದಕ್ಷ, ವೆಚ್ಚ-ಪರಿಣಾಮಕಾರಿ ಮತ್ತು ಸಮಕಾಲೀನ ಜಗತ್ತಿಗೆ ಹೊಂದಿಕೊಳ್ಳುವಂತೆ ರೂಪಿಸುವುದು.
ಮುಖ್ಯ ಕ್ರಮಗಳು:* ಯುಎನ್ ಕಾರ್ಯಪದ್ಧತಿಗಳನ್ನು ಸುಧಾರಿಸಲು ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಕ್ಷೇತ್ರಗಳನ್ನು ಗುರುತಿಸುವುದು.* ಸದಸ್ಯ ರಾಷ್ಟ್ರಗಳಿಂದ ಬಂದ ಆದೇಶಗಳ ಅನುಷ್ಠಾನವನ್ನು ಪರಿಶೀಲಿಸುವುದು.*ಆಳವಾದ ಪರಿಷ್ಕರಣೆಗಳು ಮತ್ತು ಕಾರ್ಯತಂತ್ರದ ವಿಮರ್ಶೆ ನಡೆಸುವುದು.
ಸಂಪನ್ಮೂಲ ಸವಾಲುಗಳು:* ಯುಎನ್ ದ್ರವ್ಯತೆ ಬಿಕ್ಕಟ್ಟನ್ನು ಎದುರಿಸುತ್ತಿದೆ, ಏಕೆಂದರೆ ಎಲ್ಲಾ ಸದಸ್ಯ ರಾಷ್ಟ್ರಗಳು ಪಾವತಿಯನ್ನು ಪೂರ್ಣಗೊಳಿಸುತ್ತಿಲ್ಲ ಅಥವಾ ಸಮಯಕ್ಕೆ ಪಾವತಿಸುತ್ತಿಲ್ಲ.* ಅಮೆರಿಕ, ವಿಶ್ವಸಂಸ್ಥೆಗೆ ಅತಿದೊಡ್ಡ ಹಣಕಾಸು ಕೊಡುಗೆ ನೀಡುವ ದೇಶವಾಗಿದ್ದು, ಕೆಲವು ಸಂಸ್ಥೆಗಳಿಗೆ ಹಣಕಾಸನ್ನು ಕಡಿತಗೊಳಿಸಿದೆ.
ಭಾರತದ ಪಾತ್ರ: ಭಾರತವು 2025ರ ಬಜೆಟ್ಗೆ USD 37.64 ಮಿಲಿಯನ್ ಪಾವತಿಸಿದ್ದು, ನಿಯಮಿತ ಬಜೆಟ್ ಮೌಲ್ಯಮಾಪನಗಳನ್ನು ಸಮಯಕ್ಕೆ ಪಾವತಿಸಿದ 35 ರಾಷ್ಟ್ರಗಳ "ಗೌರವ ಪಟ್ಟಿ"ಯಲ್ಲಿ ಸ್ಥಾನ ಪಡೆದಿದೆ.
ಗುಟೆರೆಸ್ ಅವರ ಅಭಿಪ್ರಾಯ:* ವಿಶ್ವಸಂಸ್ಥೆಯ ಸಂಪನ್ಮೂಲ ಕೊರತೆ ಜನರಿಗೆ ಹಾನಿ ಮಾಡುತ್ತದೆ, ವಿಶೇಷವಾಗಿ ಆರೋಗ್ಯ ಸೇವೆ ಮತ್ತು ಮಾನವೀಯ ನೆರವಿನಲ್ಲಿ.* ಯುಎನ್ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಲು ದಕ್ಷತೆ, ಹೊಂದಾಣಿಕೆ, ಮತ್ತು ಕ್ರೋಢೀಕರಣ ಅಗತ್ಯವಿದೆ.ಈ "UN80" ಉಪಕ್ರಮವು 21ನೇ ಶತಮಾನಕ್ಕೆ ಹೊಂದಿಕೊಳ್ಳುವಂತೆ ವಿಶ್ವಸಂಸ್ಥೆಯ ಪರಿಷ್ಕರಣೆ ಮತ್ತು ಬಲವರ್ಧನದ ಪ್ರಯತ್ನವಾಗಿದೆ.