Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಜೂನ್ ವರೆಗೆ ಯುದ್ಧ ಮುಂದುವರಿದರೆ 4.5 ಕೋಟಿ ಜನರಿಗೆ ಹಸಿವಿನ ಸಂಕಷ್ಟ: ವಿಶ್ವಸಂಸ್ಥೆಯ ಆಘಾತಕಾರಿ ವರದಿ
Authored by:
Akshata Halli
Date:
20 ಮಾರ್ಚ್ 2026
➤
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಆಹಾರ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ
ವಿಶ್ವ ಆಹಾರ ಕಾರ್ಯಕ್ರಮ (World Food Programme - WFP)
ಎಚ್ಚರಿಸಿದೆ. ಯುದ್ಧವು ಇದೇ ರೀತಿ ಜೂನ್ ತಿಂಗಳವರೆಗೆ ಮುಂದುವರಿದರೆ, ವಿಶ್ವದಾದ್ಯಂತ ಹೆಚ್ಚುವರಿಯಾಗಿ
4.5 ಕೋಟಿ (45 ಮಿಲಿಯನ್)
ಜನರು ತೀವ್ರ ಹಸಿವಿನಿಂದ ಬಳಲಲಿದ್ದಾರೆ. ಈಗಾಗಲೇ ಜಗತ್ತಿನಾದ್ಯಂತ ಸುಮಾರು
31.9 ಕೋಟಿ
ಜನರು ಆಹಾರ ಅಭದ್ರತೆಯಿಂದ ಬಳಲುತ್ತಿದ್ದಾರೆ. ಸಂಘರ್ಷ ಮುಂದುವರಿದರೆ ಈ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಲಿದೆ. ಮತ್ತು ಯುದ್ಧದ ಹಿನ್ನೆಲೆಯಲ್ಲಿ ಸಮುದ್ರ ಮಾರ್ಗವಾಗಿ ನಡೆಯುವ ಹಡಗು ಸಾರಿಗೆ ವೆಚ್ಚದಲ್ಲಿ ಶೇ.
18 ರಷ್ಟು ಏರಿಕೆ
ಯಾಗಿದೆ ಎಂದು ತಿಳಿಸಿದೆ.
➤
ಜಾಗತಿಕ ಆರ್ಥಿಕತೆಯ ಮೇಲೆ ಯುದ್ಧದ ಪ್ರಭಾವ:
ಜಿನೀವಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ WFP ಡೆಪ್ಯೂಟಿ ಎಕ್ಸಿಕ್ಯೂಟಿವ್ ಡೈರಕ್ಟರ್
ಕಾರ್ಲ್ ಸೌ
ಅವರು ಕೆಲವು ಆತಂಕಕಾರಿ ಅಂಶಗಳನ್ನು ಹಂಚಿಕೊಂಡಿದ್ದಾರೆ:
- ವ್ಯಾಪಾರ ಮಾರ್ಗಗಳ ಬಂದ್:
ಇರಾನ್ ಯುದ್ಧದಿಂದಾಗಿ ಅತಿ ಪ್ರಮುಖ ವ್ಯಾಪಾರ ಮಾರ್ಗವಾದ ಹೊರ್ಮುಜ್ ಜಲಸಂಧಿ (Strait of Hormuz) ಬಂದ್ ಆಗಿದೆ. ಇದು ಜಾಗತಿಕ ತೈಲ ಮತ್ತು ಸರಕು ಸಾಗಣೆಯ ಮೇಲೆ ನೇರ ಪರಿಣಾಮ ಬೀರಿದೆ.
- ಬೆಲೆ ಏರಿಕೆ:
ಕಚ್ಚಾ ತೈಲ, ರಸಗೊಬ್ಬರ ಮತ್ತು ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ. ಇದು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.
- ಸರಬರಾಜು ಸರಪಳಿ ವ್ಯತ್ಯಯ:
ಯುದ್ಧದ ಕಾರಣದಿಂದಾಗಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಇದು ಹಣದುಬ್ಬರಕ್ಕೆ (Inflation) ನಾಂದಿ ಹಾಡಿದೆ.
➤
WFP (World Food Programme):
ಇದರ ಪ್ರಧಾನ ಕಚೇರಿ ಇಟಲಿಯ
ರೋಮ್
ನಲ್ಲಿದೆ. ಹಸಿವನ್ನು ಹೋಗಲಾಡಿಸುವ ಮತ್ತು ಆಹಾರ ಭದ್ರತೆಯನ್ನು ಉತ್ತೇಜಿಸುವ ವಿಶ್ವದ ಅತಿದೊಡ್ಡ ಮಾನವೀಯ ಸಂಸ್ಥೆಯಾಗಿದೆ.
Take Quiz
Loading...