* ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುಗಾರ ಎಂಬ ಹಣೆಪಟ್ಟಿ ಭಾರತದಿಂದ ಈಗ ಉಕ್ರೇನ್ ಪಾಲಾಗಿದೆ. ರಷ್ಯಾ ದಾಳಿಯ ನಂತರ, ಉಕ್ರೇನ್ ಶಸ್ತ್ರಾಸ್ತ್ರ ಆಮದಿಯಲ್ಲಿ ಮುಂಚೂಣಿಯಲ್ಲಿದೆ.* 2020-24ನೇ ಸಾಲಿನಲ್ಲಿ ಉಕ್ರೇನ್ ಅತಿಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ. 2015-19ನೇ ಸಾಲಿಗೆ ಹೋಲಿಸಿದರೆ ಈ ಅವಧಿಯಲ್ಲಿ ಉಕ್ರೇನ್ನ ಶಸ್ತ್ರಾಸ್ತ್ರಗಳ ಆಮದಿನ ಪ್ರಮಾಣ 100 ಪಟ್ಟು ಹೆಚ್ಚಾಗಿದೆ.* 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣಪ್ರಮಾಣದ ದಾಳಿ ನಡೆಸಿದ ಬಳಿಕ, ಕನಿಷ್ಠ 35 ದೇಶಗಳು ಉಕ್ರೇನ್ಗೆ ಶಸ್ತ್ರಾಸ್ತ್ರ ಪೂರೈಸಿವೆ ಎಂದು ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಎಸ್ಐಪಿಆರ್ಐ) ತಿಳಿಸಿದೆ.* ಉಕ್ರೇನ್ಗೆ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಅಮೆರಿಕವೇ ಪೂರೈಸುತ್ತಿದೆ. ದೇಶದ ಶೇ.45ರಷ್ಟು ಶಸ್ತ್ರಾಸ್ತ್ರಗಳ ಆಮದು ಅಮೆರಿಕದಿಂದಲೇ ಆಗುತ್ತಿದೆ.* ಭಾರತ ಶಸ್ತ್ರಾಸ್ತ್ರಗಳ ಆಮದಿನಲ್ಲಿ ಮೊದಲಿನಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ. ವಿಶ್ವ ಶಸ್ತ್ರಾಸ್ತ್ರ ಆಮದಿಯಲ್ಲಿ ಶೇ.3ರಷ್ಟು ಪಾಲು ಹೊಂದಿರುವ ಭಾರತ, 2015-19ಕ್ಕೆ ಹೋಲಿಸಿದರೆ 2020-24ರಲ್ಲಿ ಶೇ.9.3ರಷ್ಟು ಕುಸಿತ ಕಂಡಿದೆ. ರಷ್ಯಾದಿಂದ ಶಸ್ತ್ರಾಸ್ತ್ರ ಆಮದು ಶೇ.36ಕ್ಕೆ ತಗ್ಗಿದ್ದು, 2010-14ರಲ್ಲಿ ಇದು ಶೇ.72 ಆಗಿತ್ತು.* ಅಮೆರಿಕ ಅತಿದೊಡ್ಡ ಶಸ್ತ್ರಾಸ್ತ್ರ ರಫ್ತು ದೇಶವಾಗಿದ್ದು, ಫ್ರಾನ್ಸ್ ದ್ವಿತೀಯ ಹಾಗೂ ರಷ್ಯಾ ತೃತೀಯ ಸ್ಥಾನದಲ್ಲಿದೆ. ಉಕ್ರೇನ್ ಯುದ್ಧದ ನಂತರ ರಷ್ಯಾದ ರಫ್ತಿಗೆ ಹೊಡೆತ ಬಿದ್ದಿದೆ. ಚೀನಾ ನಾಲ್ಕನೇ ಸ್ಥಾನದಲ್ಲಿದೆ.