* ಉಕ್ರೇನ್ಗೆ ಅಮೆರಿಕದಿಂದ ನೀಡಲಾಗುತ್ತಿದ್ದ ಸೇನಾ ನೆರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.* ಕಳೆದ ವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ಅವರೊಂದಿಗೆ ಓವಲ್ ಕಚೇರಿಯಲ್ಲಿ ನಡೆದ ವಾಗ್ವಾದದ ನಂತರ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿ ಹೇಳಿದೆ.* ಈ ನಿರ್ಧಾರವು, ಉಕ್ರೇನ್ಗೆ ಶತಕೋಟಿ ಡಾಲರ್ ಮೌಲ್ಯದ (ಅಂದಾಜು ₹8,700 ಕೋಟಿ) ಶಸ್ತ್ರಾಸ್ತ್ರಗಳ ಪೂರೈಕೆ ಮೇಲೆ ಪರಿಣಾಮ ಬೀರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.* ರಷ್ಯಾ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಬದ್ಧತೆ ಪ್ರದರ್ಶಿಸುವ ಕುರಿತು ಟ್ರಂಪ್ ಅವರಿಗೆ ಮನವರಿಕೆಯಾಗುವವರೆಗೆ ಈ ಆದೇಶ ಜಾರಿಯಲ್ಲಿಇರಲಿದೆ’ ಎಂದೂ ಅಧಿಕಾರಿಗಳು ಹೇಳಿದ್ದಾರೆ.* ಅಮೆರಿಕಾ ನೀಡುವ ಕೋಟ್ಯಂತರ ಡಾಲರ್ ಉಕ್ರೇನ್ ಭದ್ರತಾ ನೆರವು ಈ ಆದೇಶದಿಂದ ಸ್ಥಗಿತಗೊಳ್ಳಲಿದೆ. ಈ ಹಣವನ್ನು ಉಕ್ರೇನ್ ಹೊಸ ಶಸ್ತ್ರಾಸ್ತ್ರ ಖರೀದಿಗೆ ಬಳಸಲು ಉದ್ದೇಶಿಸಿತ್ತು.* ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದಾಗಿನಿಂದ ಈ ವರೆಗೆ ಉಕ್ರೇನ್ಗೆ 65.9 ಶತಕೋಟಿ ಡಾಲರ್ನಷ್ಟು (ಅಂದಾಜು ₹ 5 ಲಕ್ಷ ಕೋಟಿ) ಸೇನಾ ನೆರವು ನೀಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ.* ಐರೋಪ್ಯ ಒಕ್ಕೂಟ (ಇಯು) ಯುರೋಪ್ನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ₹7 ಸಾವಿರ ಕೋಟಿ (800 ಶತಕೋಟಿ ಯುರೊ) ಮೊತ್ತದ ಯೋಜನೆ ಪ್ರಸ್ತಾಪಿಸಿದೆ. ಉಕ್ರೇನ್ಗೆ ಅಮೆರಿಕ ಸೇನಾ ನೆರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಉಂಟಾಗಬಹುದಾದ ಪರಿಣಾಮ ತಗ್ಗಿಸಲು ಹಾಗೂ ರಷ್ಯಾಗೆ ಪ್ರತಿಸ್ಪಂಧಿಸಲು ಈ ಯೋಜನೆ ರೂಪಿಸಲಾಗಿದೆ.* ಒಕ್ಕೂಟದ 27 ಸದಸ್ಯ ರಾಷ್ಟ್ರಗಳು ಬ್ರುಸೆಲ್ಸ್ನಲ್ಲಿ ಸಭೆ ಸೇರಿ ಈ ಪ್ರಸ್ತಾವದ ಕುರಿತು ಚರ್ಚೆ ನಡೆಸಲಿವೆ. ಯುರೋಪ್ನ ರಾಷ್ಟ್ರಗಳು ರಕ್ಷಣಾ ಖರೀದಿಗೆ ಮಾಡುವ ವೆಚ್ಚದ ಮಿತಿಯನ್ನು ಸಡಿಲಿಸಿ, ಅದನ್ನು ಶೇ 1.5ರಷ್ಟು ಹೆಚ್ಚಿಸಿದರೆ, ನಾಲ್ಕು ವರ್ಷಗಳಲ್ಲಿ 650 ಶತಕೋಟಿ ಯುರೊ ವೆಚ್ಚಿಸಲು ಸಾಧ್ಯವಿರುತ್ತದೆ ಎಂದು ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೆಯೆನ್ ತಿಳಿಸಿದ್ದಾರೆ.