* ಉಕ್ರೇನ್ ಜೊತೆಗೆ ಅಮೆರಿಕ ಖನಿಜ ಮತ್ತು ಇಂಧನ ಸಂಪತ್ತಿನ ಬಳಕೆಯ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಯುದ್ಧಪೀಡಿತ ಉಕ್ರೇನ್ಗೆ ಆರ್ಥಿಕ ಪುನರ್ಸ್ಥಾಪನೆ ಮತ್ತು ರಕ್ಷಣೆಯಲ್ಲಿ ಸಾಥ್ ನೀಡುವ ಉದ್ದೇಶದಿಂದ ಈ ಒಪ್ಪಂದ ನಡೆದಿದೆ.* ಈ ಒಪ್ಪಂದದ ಪ್ರಕಾರ, ಉಕ್ರೇನ್ನ ಭೂಮಿಯಲ್ಲಿ ಲಭ್ಯವಿರುವ ಗ್ರಾಫೈಟ್, ಟೈಟಾನಿಯಂ ಮತ್ತು ಲಿಥಿಯಂ ಸೇರಿದಂತೆ ಪ್ರಮುಖ ಖನಿಜ ಸಂಪತ್ತನ್ನು ಉಕ್ರೇನ್ ಮತ್ತು ಅಮೆರಿಕ 50-50 ಹಂಚಿಕೊಳ್ಳುತ್ತವೆ. ಆದರೆ ನೈಸರ್ಗಿಕ ಸಂಪತ್ತಿನ ಮಾಲೀಕತ್ವ ಉಕ್ರೇನ್ಗೇ ಉಳಿಯುತ್ತದೆ.* ಅಮೆರಿಕದ ಶಸ್ತ್ರಾಸ್ತ್ರ ಸಹಾಯ ಹಾಗೂ ಹಣಕಾಸು ನೆರವಿಗೆ ಬದಲಾಗಿ ಉಕ್ರೇನ್ ತನ್ನ ಸಂಪತ್ತಿಗೆ ಬಾಗಿಲು ತೆರೆದಿದೆ. ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ನೀಡಿದ ಹೇಳಿಕೆ "ಬೆಂಬಲ ಬೇಕಾದರೆ ವೆಚ್ಚ ವಾಪಸ್ ಕೊಡಿ" ಎಂಬುದು ಈ ಡೀಲ್ಗೆ ವೇದಿಕೆ ಸಿದ್ಧಪಡಿಸಿದೆ.* ಈ ಒಪ್ಪಂದವು ಬುಧವಾರ ವಾಷಿಂಗ್ಟನ್ನಲ್ಲಿ ಸಹಿಯಾಗಿದ್ದು, ಉಕ್ರೇನ್ಗೆ ಅಮೆರಿಕದ ದಿಟ್ಟ ಬೆಂಬಲವನ್ನು ಸೂಚಿಸುತ್ತದೆ. ಇದರಿಂದ ಉಕ್ರೇನ್ ಯುದ್ಧದ ಮಧ್ಯೆ ಆರ್ಥಿಕ ಚೇತರಿಕೆಗೆ ಆಸರೆ ಕಂಡುಕೊಳ್ಳಲಿದೆ.