* ಕೇಂದ್ರ ಸರ್ಕಾರ ಉಜ್ವಲ ಯೋಜನೆಗೆ 12,060 ಕೋಟಿ ರೂ. ಸಬ್ಸಿಡಿ ನೀಡಲು ಸಂಪುಟ ಅನುಮೋದನೆ ನೀಡಿದೆ.* ಇದರಡಿ ಗೃಹ ಬಳಕೆ LPG ಸಿಲಿಂಡರ್ಗೆ ವರ್ಷಕ್ಕೆ 9 ರೀಫಿಲ್ಸ್ವರೆಗೆ ಪ್ರತಿ ಸಿಲಿಂಡರ್ಗೆ 300 ರೂ. ಸಬ್ಸಿಡಿ ನೀಡಲಾಗುತ್ತದೆ. ಈ ಯೋಜನೆಯಿಂದ ದೇಶಾದ್ಯಂತ ಬಡ ಮಹಿಳೆಯರು ಪ್ರಯೋಜನ ಪಡೆಯಲಿದ್ದಾರೆ.* ಸಾರ್ವಜನಿಕ ವಲಯದ ತೈಲ ಕಂಪನಿಗಳ ನಷ್ಟ ಭರಿಸಲು 30,000 ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿದೆ. ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಕಂಪನಿಗಳಿಗೆ ಈ ಹಣ 12 ಕಂತುಗಳಲ್ಲಿ ಜಮೆ ಮಾಡಲಾಗುತ್ತದೆ.* ಜಾಗತಿಕ ಇಂಧನ ದರ ಏರಿಳಿತದಿಂದ ಗ್ರಾಹಕರು ಹಾಗೂ ಕಂಪನಿಗಳು ಹಾನಿಗೊಳಗಾಗದಂತೆ ಈ ನಿರ್ಧಾರ ಕೈಗೊಂಡಿದೆ.* ತಾಂತ್ರಿಕ ಶಿಕ್ಷಣದಲ್ಲಿ ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನಾ ಸುಧಾರಣೆಗೆ 4,200 ಕೋಟಿ ರೂ. ಅನುದಾನವನ್ನು ಕೂಡ ಸರ್ಕಾರ ಘೋಷಿಸಿದೆ.