Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
UGC ಹೊಸ ನಿಯಮಗಳು 2026: ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯಕ್ಕೆ ಮುಕ್ತಿ
Authored by:
Akshata Halli
Date:
27 ಜನವರಿ 2026
➤
ಭಾರತೀಯ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಬೇರುಸಹಿತ ಕಿತ್ತೆಸೆಯಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC- University Grants Commission (India's statutory body for higher education standards & funding).'ಸಮಾನತೆಯ ಪ್ರಚಾರ (Promotion of Equity) ನಿಯಮಗಳು 2026' ಅನ್ನು ಜಾರಿಗೆ ತಂದಿದೆ.
ಇದು 2012ರ ಹಳೆಯ ನಿಯಮಗಳ ಬದಲಿಗೆ ಹೆಚ್ಚು ಕಟ್ಟುನಿಟ್ಟಾದ ಮತ್ತು ಕಾನೂನುಬದ್ಧ ಚೌಕಟ್ಟನ್ನು ಒದಗಿಸುತ್ತದೆ.
➤
ಕಳೆದ ಕೆಲವು ವರ್ಷಗಳಲ್ಲಿ (2019-2024) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ಪ್ರಕರಣಗಳು
118.4%
ರಷ್ಟು ಏರಿಕೆಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ.
ರೋಹಿತ್ ವೇಮುಲ ಮತ್ತು ಪಾಯಲ್ ತದ್ವಿ ಅವರಂತಹ ಪ್ರಕರಣಗಳು ಕ್ಯಾಂಪಸ್ಗಳಲ್ಲಿ ತುರ್ತು ಸುಧಾರಣೆಯ ಅಗತ್ಯವನ್ನು ಒತ್ತಿಹೇಳಿದ್ದವು. ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಅಡಿಯಲ್ಲಿ ಈ ಹೊಸ ನಿಯಮಗಳನ್ನು ರೂಪಿಸಲಾಗಿದೆ.
➤
ಹೊಸ ನಿಯಮಗಳ ಪ್ರಮುಖ ಲಕ್ಷಣಗಳು:
1.
OBC ಸಮುದಾಯದ ಸೇರ್ಪಡೆ:
ಹಿಂದಿನ ಕರಡುಗಳಲ್ಲಿ ಇಲ್ಲದಿದ್ದರೂ, ಹೊಸ ನಿಯಮಗಳಲ್ಲಿ SC, ST ಗಳೊಂದಿಗೆ
ಇತರೆ ಹಿಂದುಳಿದ ವರ್ಗಗಳನ್ನು (OBC)
ಸಹ ರಕ್ಷಣಾ ವ್ಯಾಪ್ತಿಗೆ ತರಲಾಗಿದೆ. ಅಲ್ಲದೆ ವಿಕಲಚೇತನರು (PwBD) ಮತ್ತು ಮಹಿಳೆಯರಿಗೂ ಇದು ಅನ್ವಯಿಸುತ್ತದೆ.
2.
ಸಮಾನ ಅವಕಾಶ ಕೇಂದ್ರಗಳು (Equal Opportunity Centres):
ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯು ಕಡ್ಡಾಯವಾಗಿ ಈ ಕೇಂದ್ರಗಳನ್ನು ಸ್ಥಾಪಿಸಬೇಕು.
ಇದು ವಿಫಲವಾದರೆ ಸಂಸ್ಥೆಯ UGC ಮಾನ್ಯತೆ ರದ್ದಾಗುವ ಸಾಧ್ಯತೆ ಇರುತ್ತದೆ.
3.
ಸಮಾನತೆ ಸಮಿತಿ (Equity Committees):
ಸಂಸ್ಥೆಯ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ಈ ಸಮಿತಿ ಇರಬೇಕು.
ಇದರಲ್ಲಿ SC, ST, OBC, PwBD ಮತ್ತು ಮಹಿಳಾ ಪ್ರತಿನಿಧಿಗಳು ಇರುವುದು ಕಡ್ಡಾಯ.
4.
ತ್ವರಿತ ದೂರು ಪರಿಹಾರ:
=> ದೂರು ಬಂದ
24 ಗಂಟೆಗಳ ಒಳಗಾಗಿ
ಸಮಿತಿಯು ಸಭೆ ಸೇರಬೇಕು.
=> ದೂರಿನ ಕುರಿತಾದ ತನಿಖಾ ವರದಿಯನ್ನು
15 ಕೆಲಸದ ದಿನಗಳೊಳಗೆ
ಸಲ್ಲಿಸಬೇಕು.
5.
24/7 ಸಹಾಯವಾಣಿ:
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಾಗಿ ದಿನದ 24 ಗಂಟೆಯೂ ಲಭ್ಯವಿರುವ ಸಹಾಯವಾಣಿ ಮತ್ತು ಆನ್ಲೈನ್ ದೂರು ದಾಖಲಿಸುವ ವ್ಯವಸ್ಥೆ ಇರಬೇಕು.
6.
ಸಂಸ್ಥೆಯ ಮುಖ್ಯಸ್ಥರ ಹೊಣೆಗಾರಿಕೆ:
ಕ್ಯಾಂಪಸ್ನಲ್ಲಿ ನಡೆಯುವ ಯಾವುದೇ ತಾರತಮ್ಯ ಅಥವಾ ಕಿರುಕುಳಕ್ಕೆ ಸಂಸ್ಥೆಯ ಮುಖ್ಯಸ್ಥರನ್ನೇ (ಕುಲಪತಿಗಳು/ಪ್ರಾಂಶುಪಾಲರು) ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
➤
ನಿಯಮಗಳ ಉಲ್ಲಂಘನೆಗೆ ದಂಡನೆಗಳು:
UGC ಮಾರ್ಗಸೂಚಿಗಳನ್ನು ಪಾಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು:
=> UGC ನೀಡುವ ಧನಸಹಾಯ ಮತ್ತು ಯೋಜನೆಗಳಿಂದ ವಂಚಿತಗೊಳಿಸುವುದು.
=> ಪದವಿ ಪ್ರದಾನ ಮಾಡುವ ಅಧಿಕಾರವನ್ನು ಹಿಂಪಡೆಯುವುದು.
=> UGC ಯ ಅಧಿಕೃತ ಮಾನ್ಯತೆ ಪಡೆದ ಸಂಸ್ಥೆಗಳ ಪಟ್ಟಿಯಿಂದ ಹೆಸರನ್ನು ತೆಗೆದುಹಾಕುವುದು.
➤
UGC ಯ ಈ ಕ್ರಾಂತಿಕಾರಿ ಹೆಜ್ಜೆಯು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಸಹಕಾರಿಯಾಗಿದೆ. ಶಿಕ್ಷಣ ಸಂಸ್ಥೆಗಳು ಕೇವಲ ಅಂಕಗಳನ್ನು ನೀಡುವ ಕೇಂದ್ರಗಳಾಗದೆ, ಪ್ರತಿಯೊಬ್ಬ ವಿದ್ಯಾರ್ಥಿಗೂ ಘನತೆ ಮತ್ತು ಸಮಾನ ಗೌರವ ನೀಡುವ ಪವಿತ್ರ ತಾಣಗಳಾಗಬೇಕೆಂಬುದು ಈ ನಿಯಮದ ಆಶಯವಾಗಿದೆ.
Take Quiz
Loading...