* ಉದ್ಯೋಗ ಕೌಶಲ ಹೊಂದಿರುವ 'ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದು ಭಾರತದ ಕೌಶಲ ವರದಿ ತಿಳಿಸಿದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ, ದಿಲ್ಲಿ ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಿವೆ.* 'ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್, ಕಾಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಮತ್ತು ಅಸೋಸಿಯೇಷನ್ ಇಂಡಿಯನ್ ಯೂನಿವರ್ಸಿಟೀಸ್ ಸೇರಿದಂತೆ ವಿವಿಧ ಏಜೆನ್ಸಿಗಳ ಸಹಯೋಗದೊಂದಿಗೆ ಪ್ರತಿಭಾ ಮೌಲ್ಯಮಾಪನ ಸಂಸ್ಥೆ 'ವೀಬಾಕ್ಸ್', ದೇಶದಾದ್ಯಂತ 6.50 ಲಕ್ಷ ಯುವಜನರನ್ನು ಸಮೀಕ್ಷೆ ನಡೆಸಿ 'ಭಾರತದ ಕೌಶಲ ವರದಿ-2025' ಸಿದ್ಧಪಡಿಸಿದೆ.* ವರದಿ ಪ್ರಕಾರ, ದೇಶದಲ್ಲಿ ಶೇ.54.81 ರಷ್ಟು ಮಂದಿ ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಹೊಂದುವ ಮೂಲಕ ಕೌಶಲಕ್ಕೆ ತಕ್ಕ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಶೇ.50ರಷ್ಟು ಪದವೀಧರರು ಉದ್ಯೋಗಕ್ಕೆ ಅರ್ಹರಾಗಿದ್ದಾರೆ. ದಶಕದ ಹಿಂದೆ ಇದರ ಪ್ರಮಾಣ ಶೇ.33ರಷ್ಟಿತ್ತು. * ಭಾರತದಲ್ಲಿ ಕೃತಕ ಬುದ್ಧಿಮತ್ತೆ, ಕೌಡ್ ಕಂಪ್ಯೂಟಿಂಗ್ ಮತ್ತು ಆಟೊಮೇಷನ್ ನಂಥ ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಹೆಚ್ಚು ಗಮನ ನೀಡಲಾಗುತ್ತಿದೆ. ಇದರೊಂದಿಗೆ ಸಾಂಪ್ರದಾಯಿಕ ಉದ್ಯೋಗಗಳನ್ನು ಮರುರೂಪಿಸುವುದು ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸುವತ್ತ ದೇಶ ಗಮನಹರಿಸುತ್ತಿದೆ. * ದೇಶದಲ್ಲಿ ಹೈಬ್ರಿಡ್ ಕೆಲಸದ ಮಾದರಿಗಳ ಅನುಸರಣೆಯು ಭಾರತೀಯ ಪ್ರತಿಭೆಗಳಿಗೆ ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.* ವರದಿಯ ಪ್ರಕಾರ, ಕೇರಳ ರಾಜ್ಯ ಅತಿ ಹೆಚ್ಚು ಪ್ರತಿಭೆಗಳನ್ನು ಹೊಂದಿದ್ದು, 22ರಿಂದ 25 ವರ್ಷದ ಶೇ.87.47ರಷ್ಟು ಯುವ ಸಮುದಾಯ ಹೆಚ್ಚಿನ ಉದ್ಯೋಗಾವಕಾಶಗಳನ್ನು ಹೊಂದಿದೆ. 26ರಿಂದ 29 ವರ್ಷದ ಅನುಭವಿ ವೃತ್ತಿಪರರು ಶೇ.68.82ರಷ್ಟು ಮಂದಿ ಇದ್ದಾರೆ. * ಉದ್ಯೋಗ " ದರದಲ್ಲಿ ಉನ್ನತ ಸ್ಥಾನದಲ್ಲಿ ಕೇರಳ ಇದೆ. ಮಹಿಳೆಯರಿಗೆ ಗಮನಾರ್ಹ ಅವಕಾಶ ಹೊಂದಿರುವ ರಾಜ್ಯಗಳಲ್ಲಿ ಕೇರಳ ಮೂರನೇ ಸ್ಥಾನದಲ್ಲಿದೆ. ಇಂಟರ್ನ್ಷಿಪ್ ಆದ್ಯತೆಗಳಲ್ಲೂ ಕೇರಳ ಅತ್ಯುನ್ನತ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ. ಉದ್ಯೋಗ ಯೋಗ್ಯ ಕೌಶಲ ವರದಿ : ಭಾರತದ ಟಾಪ್ ರಾಜ್ಯಗಳು1. ಮಹಾರಾಷ್ಟ್ರ 2. ದಿಲ್ಲಿ 3. ಕರ್ನಾಟಕ 4. ಆಂಧ್ರಪ್ರದೇಶ 5. ಕೇರಳ