➤ ಪೂರ್ವ ಏಷ್ಯಾದ ಪ್ರಮುಖ ರಾಷ್ಟ್ರವಾದ ಮಂಗೋಲಿಯಾದಲ್ಲಿ ನಡೆದ ರಾಜಕೀಯ ಬೆಳವಣಿಗೆಯೊಂದರಲ್ಲಿ, ಉಚ್ರಾಲ್ ನ್ಯಾಮ್-ಓಸರ್ (Uchral Nyam-Osor) ಅವರು ದೇಶದ ನೂತನ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇತ್ತೀಚೆಗೆ ನಡೆದ ಸಂಸತ್ತಿನ ಬಿಕ್ಕಟ್ಟಿನ ನಂತರ ಈ ಮಹತ್ವದ ಬದಲಾವಣೆ ಸಂಭವಿಸಿದೆ.➤ ಉಚ್ರಾಲ್ ಅವರು ಆಡಳಿತಾರೂಢ ಮಂಗೋಲಿಯನ್ ಪೀಪಲ್ಸ್ ಪಾರ್ಟಿ (MPP) ನ ಪ್ರಮುಖ ನಾಯಕರಾಗಿದ್ದಾರೆ. ಇವರು ಈ ಹಿಂದೆ ಡಿಜಿಟಲ್ ಅಭಿವೃದ್ಧಿ ಮತ್ತು ಸಂವಹನ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಮಂಗೋಲಿಯಾದಲ್ಲಿ ತಲೆದೂರಿದ್ದ ಆರ್ಥಿಕ ಸವಾಲುಗಳು ಮತ್ತು ಸಂಸತ್ತಿನ ಸ್ಥಗಿತವನ್ನು (Stalemate) ನಿವಾರಿಸಲು ಇವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ.➤ ಮಾರ್ಚ್ 2026 ರಲ್ಲಿ ನಡೆದ ಮಂಗೋಲಿಯಾದ ಸಂಸತ್ತಿನ ಅಧಿವೇಶನದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳಿಂದಾಗಿ ಸರ್ಕಾರ ರಚನೆಯಲ್ಲಿ ಅನಿಶ್ಚಿತತೆ ಮೂಡಿತ್ತು. ಈ ಬಿಕ್ಕಟ್ಟನ್ನು ಹೋಗಲಾಡಿಸಲು ಸಂಸತ್ತು ಉಚ್ರಾಲ್ ಅವರ ಹೆಸರನ್ನು ಅನುಮೋದಿಸಿತು. ಚೀನಾ ಮತ್ತು ರಷ್ಯಾ ದೇಶಗಳ ನಡುವೆ ಇರುವ ಭೂಬದ್ಧ (Landlocked) ರಾಷ್ಟ್ರವಾಗಿರುವ ಮಂಗೋಲಿಯಾಕ್ಕೆ ಇವರ ನಾಯಕತ್ವವು ಭೌಗೋಳಿಕ ರಾಜಕೀಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.➤ ಭಾರತ ಮತ್ತು ಮಂಗೋಲಿಯಾ ಐತಿಹಾಸಿಕವಾಗಿ ಉತ್ತಮ ಸಂಬಂಧವನ್ನು ಹೊಂದಿವೆ. ಭಾರತವು ಮಂಗೋಲಿಯಾವನ್ನು ತನ್ನ 'Extended Neighborhood' (ವಿಸ್ತರಿತ ನೆರೆಹೊರೆ) ಭಾಗವೆಂದು ಪರಿಗಣಿಸುತ್ತದೆ. ಉಚ್ರಾಲ್ ಅವರ ನೇಮಕಾತಿಯಿಂದಾಗಿ ಭಾರತ-ಮಂಗೋಲಿಯಾ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.