Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಇರಾನ್-ಅಮೆರಿಕ ನಡುವೆ 2 ವಾರಗಳ ಕದನ ವಿರಾಮ: ಪಾಕಿಸ್ತಾನದ ಮಧ್ಯಸ್ಥಿಕೆ
Authored by:
Akshata Halli
Date:
9 ಎಪ್ರಿಲ್ 2026
➤ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಪಾಕಿಸ್ತಾನ ಪ್ರಮುಖ ಮಧ್ಯಸ್ಥಿಕೆ ವಹಿಸಿದ್ದು, ಇಸ್ಲಾಮಾಬಾದ್ನಲ್ಲಿ ನಡೆದ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಯ ಫಲವಾಗಿ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಉಭಯ ದೇಶಗಳು ಸಮ್ಮತಿಸಿವೆ. ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಅವರ ಪ್ರಸ್ತಾವನೆಯನ್ನು ಒಪ್ಪಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆರ್ಥಿಕವಾಗಿ ಮತ್ತು ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ
ಹಾರ್ಮುಜ್ ಜಲಸಂಧಿಯನ್ನು (Strait of Hormuz)
ನೌಕಾಯಾನಕ್ಕೆ ಮುಕ್ತವಾಗಿರಿಸಬೇಕು ಎಂಬ ಕಠಿಣ ಶರತ್ತನ್ನು ವಿಧಿಸಿದ್ದಾರೆ. ಈ ಅವಧಿಯನ್ನು ಇರಾನ್ ಜೊತೆಗಿನ ಅಂತಿಮ ಶಾಂತಿ ಒಪ್ಪಂದಕ್ಕೆ ಬಳಸಿಕೊಳ್ಳಲಾಗುವುದು ಎಂದು ಶ್ವೇತಭವನ ತಿಳಿಸಿದ್ದು, ಈ ಬೆಳವಣಿಗೆಯನ್ನು ಇರಾನ್ ವಿದೇಶಾಂಗ ಸಚಿವರು ಸ್ವಾಗತಿಸಿದ್ದಾರೆ.
➤
ಕದನ ವಿರಾಮದ ಹಿನ್ನೆಲೆ ಮತ್ತು ಪಾಕಿಸ್ತಾನದ ಪಾತ್ರ:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಇರಾನ್ ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಪಾಕಿಸ್ತಾನವು ಶಾಂತಿ ಮಾತುಕತೆಗೆ ಮುಂದಾಗಿತ್ತು. ಪಾಕಿಸ್ತಾನದ ಈ ಪ್ರಸ್ತಾವನೆಯನ್ನು ಅಮೆರಿಕ ಒಪ್ಪಿಕೊಂಡಿದ್ದು, ಮುಂದಿನ 14 ದಿನಗಳ ಗಡುವನ್ನು ಅಂತಿಮ ಶಾಂತಿ ಒಪ್ಪಂದಕ್ಕೆ ಬರಲು ಬಳಸಿಕೊಳ್ಳಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ.
➤
ಇರಾನ್ನ ಪ್ರತಿಕ್ರಿಯೆ ಮತ್ತು ಬೇಡಿಕೆಗಳು:
ಇರಾನ್ ವಿದೇಶಾಂಗ ಸಚಿವ
ಸೈಯದ್ ಅಬ್ದುಸ್ ಅರಾಗ್ನಿ
ಅವರು ಕದನ ವಿರಾಮವನ್ನು ಸ್ವಾಗತಿಸಿದ್ದಾರೆ. ಇರಾನ್ ಈಗಾಗಲೇ ಅಮೆರಿಕಕ್ಕೆ 10 ಅಂಶಗಳ ಬೇಡಿಕೆಯನ್ನು ಸಿದ್ಧಪಡಿಸಿ ಕೊಟ್ಟಿದೆ.
- ಅಮೆರಿಕ ತನ್ನ ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
- ವ್ಯಾಪಾರ ಮತ್ತು ಆರ್ಥಿಕ ನಿರ್ಬಂಧಗಳ ಮೇಲೆ ಚರ್ಚೆ ನಡೆಸಬೇಕು.
- ಒಪ್ಪಂದ ಮುಂದುವರಿದರೆ ಮಾತ್ರ ಇರಾನ್ ಪಡೆಗಳು ದಾಳಿಯಿಂದ ಹಿಂದೆ ಸರಿಯಲಿವೆ.
➤
ಇಸ್ರೇಲ್ ನಿಲುವು:
ಈ ಕದನ ವಿರಾಮವನ್ನು ಇಸ್ರೇಲ್ ಸ್ವಾಗತಿಸಿದೆಯಾದರೂ ಒಂದು ಕಠಿಣ ಷರತ್ತನ್ನು ವಿಧಿಸಿದೆ. ಈ ವಿರಾಮವು ಕೇವಲ ಇರಾನ್ ಗಡಿಗೆ ಸೀಮಿತವಾಗಿದ್ದು,
ಲೆಬನಾನ್ ಪ್ರಾಂತ್ಯದಲ್ಲಿ
ನಡೆಯುತ್ತಿರುವ ಕಾರ್ಯಾಚರಣೆಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.
➤
ಭಾರತೀಯರ ಪರಿಸ್ಥಿತಿ ಮತ್ತು ಸ್ಥಳಾಂತರ:
ಯುದ್ಧದ ಆತಂಕದ ಹಿನ್ನೆಲೆಯಲ್ಲಿ ಇರಾನ್ನಲ್ಲಿರುವ ಭಾರತೀಯರ ಸುರಕ್ಷತೆ ಈಗ ಪರಮ ಆದ್ಯತೆಯಾಗಿದ್ದು, ಸಂಘರ್ಷ ಆರಂಭವಾದಾಗ ಅಲ್ಲಿ ನೆಲೆಸಿದ್ದ ಸುಮಾರು 9,000 ಭಾರತೀಯರ ಪೈಕಿ ಈಗಾಗಲೇ 1,800 ಮಂದಿಯನ್ನು ಕೇಂದ್ರ ವಿದೇಶಾಂಗ ಇಲಾಖೆಯ ವಿಶೇಷ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ; ಉಳಿದವರು ಇರಾನ್ ಗಡಿಯಿಂದ ದೂರವಿರುವಂತೆ ಮತ್ತು ನಿರಂತರವಾಗಿ ಭಾರತೀಯ ರಾಯಭಾರ ಕಚೇರಿಯ ಸಂಪರ್ಕದಲ್ಲಿರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
Take Quiz
Loading...