* ಅಮೆರಿಕದ ಫೆಡರಲ್ ಕೋರ್ಟ್ ಟ್ರಂಪ್ ಸರ್ಕಾರ ವಿದೇಶಗಳ ಮೇಲೆ ಹೇರಿದ್ದ ಭಾರೀ ಪ್ರತಿ ತೆರಿಗೆಗೆ ತಡೆ ನೀಡಿದೆ. ಈ ತೆರಿಗೆ ಅಸಾಂವಿಧಾನಿಕ ಹಾಗೂ ಕಾನೂನು ಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.* ಟ್ರಂಪ್ ಅವರು ಅಂತಾರಾಷ್ಟ್ರೀಯ ಎಮರ್ಜೆನ್ಸಿ ಎಕನಾಮಿಕ್ ಪವರ್ಸ್ ಆ್ಯಕ್ಟ್ ಅನ್ನು ದುರುಪಯೋಗ ಪಡಿಸಿದ್ದಾರೆ ಎಂದು ಕೋರ್ಟ್ ತಿಳಿಸಿದೆ.* ಈ ಕಾಯ್ದೆ ತುರ್ತು ಪರಿಸ್ಥಿತಿಯಲ್ಲಿ ಅಧ್ಯಕ್ಷರಿಗೆ ಅಧಿಕಾರ ನೀಡಿದರೂ, ತೆರಿಗೆ ವಿಧಿಸಲು ಯಾವುದೇ ನ್ಯಾಯಾಂಗ ಆಧಾರ ಇಲ್ಲ.* ವಿದೇಶಿ ವ್ಯಾಪಾರ ನಿಯಂತ್ರಣ ಅಧಿಕಾರ ಕಾಂಗ್ರೆಸ್ಗೇ ಸೇರಿದ್ದು, ಅಧ್ಯಕ್ಷರಿಗೆ ಅಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ಟ್ರಂಪ್ ಸಾಂವಿಧಾನಿಕ ಮಿತಿಗಳನ್ನು ಮೀರಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ.* ಟ್ರಂಪ್ ನೇತೃತ್ವದ 'ಲಿಬರೇಷನ್ ಡೇ ತೆರಿಗೆ' ಅಡಿಯಲ್ಲಿ, ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ.26ರಷ್ಟು ಪ್ರತಿ ತೆರಿಗೆ ವಿಧಿಸಲಾಗಿತ್ತು. ಇದರಿಂದ ಉಂಟಾದ ಆರ್ಥಿಕ ಹಾನಿಗೆ ಉದ್ಯಮಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.