* ಜುಲೈ 1ರಿಂದ ತತ್ಕಾಲ್ ಯೋಜನೆಯಡಿ ರೈಲು ಟಿಕೆಟ್ ಬುಕ್ ಮಾಡಲು ಆಧಾರ್ ದೃಢೀಕರಿಸಿದ ಬಳಕೆದಾರರಿಗೆ ಮಾತ್ರ ಅವಕಾಶ ಇರುತ್ತದೆ ಎಂದು ರೈಲ್ವೆ ಸಚಿವಾಲಯ ಜೂನ್ 10ರಂದು ತಿಳಿಸಿದೆ.* ತತ್ಕಾಲ್ ಯೋಜನೆಯ ಪ್ರಯೋಜನವನ್ನು ಸಾಮಾನ್ಯ ಪ್ರಯಾಣಿಕರಿಗೂ ನೀಡಲು ಈ ಕ್ರಮ ಜಾರಿಗೆ ತರಲಾಗುತ್ತಿದೆ.* ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್ನಲ್ಲಿ ಬುಕ್ಕಿಂಗ್ ಮಾಡಲು ಆಧಾರ್ ದೃಢೀಕರಣ ಅಗತ್ಯವಾಗುತ್ತದೆ.* ಬುಕ್ಕಿಂಗ್ ಆರಂಭದ ಮೊದಲ 30 ನಿಮಿಷಗಳು ಅಧಿಕೃತ ಏಜೆಂಟ್ಗಳಿಗೆ ಟಿಕೆಟ್ ಬುಕ್ ಮಾಡಲು ಅವಕಾಶವಿಲ್ಲ. ಬೆಳಿಗ್ಗೆ 10ರಿಂದ 10.30ರವರೆಗೆ ಎಸಿ ಕೋಚ್ಗಳಿಗೆ ಹಾಗೂ 11ರಿಂದ 11.30ರವರೆಗೆ ನಾನ್ ಎಸಿ ಕೋಚ್ಗಳಿಗೆ ಈ ನಿಯಮ ಅನ್ವಯಿಸುತ್ತದೆ.* ಜುಲೈ 15ರಿಂದ ತತ್ಕಾಲ್ ಟಿಕೆಟ್ಗಳಿಗಾಗಿ ಆಧಾರ್ ಆಧಾರಿತ ಒಟಿಪಿ ದೃಢೀಕರಣ ಕಡ್ಡಾಯವಾಗಲಿದೆ. ಈ ಪ್ರಕ್ರಿಯೆಯ ನಂತರವೇ ಪಿಆರ್ಎಸ್ ಕೌಂಟರ್ಗಳ ಮೂಲಕ ಟಿಕೆಟ್ ಬುಕ್ ಮಾಡಬಹುದು.