* ಟಿಸಿಎಸ್ (TCS) ಕಂಪನಿಯ ಮೊದಲ ಮಹಿಳಾ ಸಿಒಒ ಆಗಿ ಆರತಿ ಸುಬ್ರಮಣಿಯಂ ಮೇ 1 ರಿಂದ ಹುದ್ದೆ ವಹಿಸಿಕೊಳ್ಳಲಿದ್ದಾರೆ.* ಭಾರತದ ಐಟಿ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ಇಂತಹ ಉನ್ನತ ಸ್ಥಾನಕ್ಕೆ ಏರಿದುದು ಅಪರೂಪವಾಗಿದೆ.* ಟಿಸಿಎಸ್ $30 ಬಿಲಿಯನ್ ಮೌಲ್ಯದ ಕಂಪನಿಯು ಮೊದಲ ಬಾರಿ ಇಂತಹ ಇತಿಹಾಸ ಸೃಷ್ಟಿಸಿದೆ.* ಆರತಿ 1986ರಲ್ಲಿ ಟಿಸಿಎಸ್ನಲ್ಲಿ ಪದವೀಧರ ತರಬೇತಿದಾರರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು.* ಅವರು ಟಾಟಾ ಗ್ರೂಪ್ನ ಹಲವು ಪ್ರಮುಖ ಯೋಜನೆಗಳನ್ನು ಮುನ್ನಡೆಸಿದ್ದಾರೆ ಇವರನ್ನು “Miss Fix-it” ಎಂದು ಕರೆಯಲಾಗುತ್ತದೆ.* ಪ್ರಸ್ತುತ ಟಾಟಾ ಸನ್ಸ್ನ ಮುಖ್ಯ ಡಿಜಿಟಲ್ ಅಧಿಕಾರಿ ಆಗಿದ್ದಾರೆ, ಡಿಜಿಟಲ್ ತಂತ್ರ, ನಾವೀನ್ಯತೆ, ಎಐ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ.* ಅವರು ವಾರಂಗಲ್ ಎನ್ಐಟಿಯಿಂದ ಬಿ.ಟೆಕ್ ಹಾಗೂ ಕಾನ್ಸಾಸ್ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.* ಸಿಇಒ ಕೆ. ಕೃತಿವಾಸನ್ ಅವರ ಪ್ರಕಾರ, ಆರತಿ ಅವರು ಕಂಪನಿಯ ತಂತ್ರಜ್ಞಾನ ಮತ್ತು ನಿರ್ಮಾಣ ಕುರಿತು ಆಳವಾದ ಅರಿವನ್ನು ಹೊಂದಿದ್ದಾರೆ.