* ವಯಾಕಾಮ್ 18 ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನ ಪಡೆದಿದೆ. ಕಳೆದ ಋತುವಿನಲ್ಲಿ ಐಪಿಎಲ್ ಡಿಜಿಟಲ್ ಹಕ್ಕುಗಳನ್ನ ಪಡೆದ ನಂತರ, ವಯಾಕಾಮ್ 18 ಈ ಬಾರಿ ಭಾರತದಲ್ಲಿ ನಡೆದ ಭಾರತೀಯ ಕ್ರಿಕೆಟ್ ತಂಡದ ದ್ವಿಪಕ್ಷೀಯ ಪಂದ್ಯಗಳ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಐದು ವರ್ಷಗಳ ಕಾಲ ಪಡೆದುಕೊಂಡಿದೆ.* ಸಪ್ಟೆಂಬರ್ ಆರಂಭದಲ್ಲಿ, ಬಿಸಿಸಿಐ ಅಂತರರಾಷ್ಟ್ರೀಯ ಮತ್ತು ದೇಶೀಯ ಪಂದ್ಯಗಳ ಮಾಧ್ಯಮ ಹಕ್ಕುಗಳಿಗೆ ಸಂಬಂಧಿಸಿದಂತೆ ಪ್ರತಿಷ್ಠಿತ ಸಂಸ್ಥೆಗಳಿಂದ ಟೆಂಡರ್ ಆಹ್ವಾನಗಳನ್ನು ಬಿಸಿಸಿಐ ಅಧಿಕೃತವಾಗಿ ಬಿಡುಗಡೆ ಮಾಡಿತು.* Viacom18 2023 ರಿಂದ 2027 ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಸೀಸನ್   ಪಂದ್ಯಗಳ ಡಿಜಿಟಲ್ ಸ್ಟ್ರೀಮಿಂಗ್ (Digital Streaming)  ಹಕ್ಕುಗಳನ್ನು ಪಡೆದುಕೊಂಡಿದೆ.