* ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರು ಹರಿಯಾಣದ ಸೋಹ್ನಾದಲ್ಲಿ ಜಪಾನ್ನ ಟಿಡಿಕೆ ಕಾರ್ಪೊರೇಷನ್ (TDK Corporation) ಕಂಪನಿಯ ಲಿಥಿಯಂ-ಐಯಾನ್ ಬ್ಯಾಟರಿ ಕಾರ್ಖಾನೆಯನ್ನು ಉದ್ಘಾಟಿಸಿದರು. ಈ ಯೋಜನೆಗೆ ಸುಮಾರು ₹3,000 ಕೋಟಿ ಹೂಡಿಕೆ ಮಾಡಲಾಗಿದೆ.* ಈ ಘಟಕದಲ್ಲಿ ಮೊಬೈಲ್ ಫೋನ್ಗಳು, ವಾಚುಗಳು, ಇಯರ್ಬಡ್ಸ್, ಲ್ಯಾಪ್ಟಾಪ್ಗಳು ಸೇರಿದಂತೆ ಧರಿಸಬಹುದಾದ ಸಾಧನಗಳಿಗೆ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ತಯಾರಿಸಲಾಗುತ್ತದೆ.* ಪ್ರತಿ ವರ್ಷ ಸುಮಾರು 20 ಕೋಟಿ ಬ್ಯಾಟರಿ ಪ್ಯಾಕ್ಗಳು ಇಲ್ಲಿ ಉತ್ಪಾದನೆಯಾಗಲಿವೆ.* ಭಾರತದ ಮೊಬೈಲ್ ಫೋನ್ ಕ್ಷೇತ್ರದಲ್ಲಿ ಪ್ರತಿ ವರ್ಷ 50 ಕೋಟಿ ಸೆಲ್ ಪ್ಯಾಕ್ ಅವಶ್ಯಕತೆ ಇದ್ದು, ಈ ಘಟಕವು ಅದರಲ್ಲಿ ಸುಮಾರು 40% ಪೂರೈಸಲಿದೆ ಎಂದು ಸಚಿವ ವೈಷ್ಣವ ಹೇಳಿದರು. ಕಾರ್ಖಾನೆಯನ್ನು ವಿಸ್ತರಿಸಲು ಹೆಚ್ಚಿನ ಅವಕಾಶವಿದೆ ಎಂದೂ ಅವರು ಹೇಳಿದರು.* ಈ ಯೋಜನೆಯಿಂದ 5,000 ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ಕಾರ್ಖಾನೆಯನ್ನು 180 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ.* ಟಿಡಿಕೆ ಎನರ್ಜಿ ಸೊಲ್ಯೂಷನ್ಸ್ನ ಸಿಇಒ ಫುಮಿಯೋ ಸಶಿದಾ ಅವರ ಪ್ರಕಾರ, ಈ ವರ್ಷ ಕೊನೆಯ ತ್ರೈಮಾಸಿಕದಲ್ಲಿ ಸಣ್ಣ ಪ್ರಮಾಣದ ಉತ್ಪಾದನೆ ಆರಂಭಿಸಿ, ಹಂತ ಹಂತವಾಗಿ 20 ಕೋಟಿವರೆಗೆ ಉತ್ಪಾದನೆಯನ್ನು ವಿಸ್ತರಿಸಲಾಗುವುದು.