* ಚೀನಾ ಟಿಬೆಟ್ನಲ್ಲಿ, ಭಾರತದ ಗಡಿ ಸಮೀಪ, ಬ್ರಹ್ಮಪುತ್ರ ನದಿಗೆ ಅತಿ ದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ನೀಡಿದೆ. ಟಿಬೆಟ್ನಲ್ಲಿ ಈ ನದಿಗೆ ಯಾರ್ಲಂಗ್ ಸಂಗ್ಪೊ ಎಂದು ಕರೆಯಲಾಗುತ್ತದೆ.* ಚೀನಾದ ಪ್ರಧಾನಿ ಲೀ ಚಿಯಾಂಗ್ ಅವರು ದಕ್ಷಿಣ ಟಿಬೆಟ್ನ ನಿಯಾಂಚಿಯಲ್ಲಿ ಈ ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಿದರು. ಈ ಯೋಜನೆಗೆ ಡಿಸೆಂಬರ್ 2024ರಲ್ಲಿ ಅನುಮೋದನೆ ನೀಡಲಾಗಿತ್ತು.* ಐದು ಜಲವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು $167.1 ಬಿಲಿಯನ್ (₹14.39 ಲಕ್ಷ ಕೋಟಿ) ಹೂಡಿಕೆ ಮಾಡಲಾಗುತ್ತಿದೆ. ಈ ಯೋಜನೆಯು ಶೂನ್ಯ ಇಂಗಾಲ ಉತ್ಸರ್ಜನೆಯ ಗುರಿಯೊಂದಿಗೇ ಟಿಬೆಟ್ನ ಆರ್ಥಿಕ ಬೆಳವಣಿಗೆಯ ಭಾಗವಾಗಿದೆ.* ಈ ಅಣೆಕಟ್ಟು ಭಾರೀ ಪ್ರಮಾಣದ ನೀರನ್ನು ನದಿಯಿಂದ ಹರಿಸಬಹುದಾದ ಕಾರಣ, ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಪ್ರವಾಹದ ಭೀತಿಯ ಬಗ್ಗೆ ಆತಂಕ ವ್ಯಕ್ತವಾಗಿದೆ. ಆದರೆ, ಚೀನಾ ಯಾವುದೇ ಅಪಾಯವಿಲ್ಲವೆಂದು ಈ ಭೀತಿಗಳನ್ನು ತಳ್ಳಿ ಹಾಕಿದೆ.