* ಟಿ20 ಕ್ರಿಕೆಟ್ನಲ್ಲಿ 600 ವಿಕೆಟ್ಗಳ ಮೈಲಿಗಲ್ಲು ತಲುಪಿದ ಮೂರನೇ ಬೌಲರ್ ಆಗಿ ಸುನಿಲ್ ನರೈನ್ ಇತಿಹಾಸ ನಿರ್ಮಿಸಿದ್ದಾರೆ, ಡಿಸೆಂಬರ್ 4, 2025 ರಂದು ಅಬು ಧಾಬಿ ನೈಟ್ ರೈಡರ್ಸ್ ಪರ ಆಡುತ್ತಾ ಈ ಸಾಧನೆ ಮಾಡಿದರು.* ಸುನಿಲ್ ಅನರು ಟಾಮ್ ಅಬೆಲ್ ವಿಕೆಟ್ ಪಡೆಯುವ ಮೂಲಕ ಈ ಹೆಗ್ಗುರುತು ತಲುಪಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಂಡರು, ರಶೀದ್ ಖಾನ್ ಮತ್ತು ಡ್ವೇನ್ ಬ್ರಾವೋ ನಂತರದ ಸ್ಥಾನವನ್ನು ಸುನಿಲ್ ಅವರು ಪಡೆದುಕೊಂಡಿದ್ದಾರೆ.* ಪ್ರಮುಖ ಅಂಶಗಳು :• ಸಾಧನೆ: T20 ಕ್ರಿಕೆಟ್ನಲ್ಲಿ 600 ವಿಕೆಟ್ಗಳ ಮೈಲಿಗಲ್ಲು ತಲುಪಿದರು.• ಸಂದರ್ಭ: ಡಿಸೆಂಬರ್ 4, 2025 ರಂದು ILT20 ಪಂದ್ಯದಲ್ಲಿ ಅಬು ಧಾಬಿ ನೈಟ್ ರೈಡರ್ಸ್ ತಂಡದ ಪರ ಆಡುತ್ತಾ ಈ ಸಾಧನೆ ಮಾಡಿದರು.• ಮೂರನೇ ಆಟಗಾರ: ಟಿ20 ಇತಿಹಾಸದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ (ರಶೀದ್ ಖಾನ್, ಡ್ವೇನ್ ಬ್ರಾವೋ ನಂತರ).• ವಿಕೆಟ್: ಸಾರ್ಜಾ ವಾರಿಯರ್ಸ್ನ ಟಾಮ್ ಅಬೆಲ್ ವಿಕೆಟ್ ಪಡೆಯುವ ಮೂಲಕ ನರೈನ್ 600 ವಿಕೆಟ್ಗಳನ್ನು ಪೂರೈಸಿದರು.• ಎಕಾನಮಿ ರೇಟ್: 568 ಪಂದ್ಯಗಳಲ್ಲಿ 6.16 ರ ಅತ್ಯುತ್ತಮ ಎಕಾನಮಿ ರೇಟ್ ಕಾಯ್ದುಕೊಂಡಿದ್ದಾರೆ.• ವಿಶೇಷ: ಟಿ20 ಕ್ರಿಕೆಟ್ನಲ್ಲಿ ಎರಡು ತಂಡಗಳಿಗಾಗಿ (Kolkata Knight Riders ಮತ್ತು Abu Dhabi Knight Riders) 100+ ವಿಕೆಟ್ ಪಡೆದ ಬೌಲರ್ಗಳಲ್ಲಿ ನರೈನ್ ಕೂಡ ಒಬ್ಬರು. * ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿ : => ರಶೀದ್ ಖಾನ್ - 681 ವಿಕೆಟ್ => ಡಿಜೆ ಬ್ರಾವೋ - 631 ವಿಕೆಟ್ => ಸುನಿಲ್ ನರೈನ್ - 600 ವಿಕೆಟ್ => ಇಮ್ರಾನ್ ತಾಹಿರ್- 570 ವಿಕೆಟ್ => ಶಕೀಬ್ ಅಲ್ ಹಸನ್ - 504 ವಿಕೆಟ್ => ಆಂಡ್ರೆ ರಸೆಲ್ - 499 ವಿಕೆಟ್ => ಕ್ರಿಸ್ ಜೋರ್ಡಾನ್ - 439 ವಿಕೆಟ್ => ವಹಾಬ್ ರಿಯಾಜ್ - 413 ವಿಕೆಟ್ => ಮೊಹಮ್ಮದ್ ಅಮೀರ್ - 409 ವಿಕೆಟ್ => ಮೊಹಮ್ಮದ್ ನಬಿ - 391 ವಿಕೆಟ್ => ಎಸ್ಎಲ್ ಮಾಲಿಂಗ - 390 ವಿಕೆಟ್