* ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಸೋಮವಾರದ(ಎ.7) ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 13,000 ರನ್ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.* ಈ ಐಪಿಎಲ್ ಋತುವಿನಲ್ಲಿ ಕೊಹ್ಲಿ ತಮ್ಮ ಎರಡನೇ ಅರ್ಧಶತಕ ದಾಖಲಿಸಿ ಮೈಲಿಗಲ್ಲನ್ನು ತಲುಪಿದರು. ಟಿ20 ಸ್ವರೂಪದಲ್ಲಿ 13,000 ರನ್ ಗಳಿಸಿದ ಐದನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.* ಕೊಹ್ಲಿ ಕಳೆದ ವರ್ಷದ ಮಧ್ಯದಲ್ಲಿ ಅಮೆರಿಕದಲ್ಲಿ ಭಾರತ ಎರಡನೇ ಟಿ 20 ವಿಶ್ವಕಪ್ ಗೆದ್ದ ನಂತರ ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾಗಿದ್ದರು. 125 ಪಂದ್ಯಗಳನ್ನು ಆಡಿ 48.69 ಸರಾಸರಿ ಮತ್ತು 137.04 ಸ್ಟ್ರೈಕ್ ರೇಟ್ನಲ್ಲಿ ಒಂದು ಶತಕ ಮತ್ತು 38 ಅರ್ಧಶತಕಗಳೊಂದಿಗೆ 4,188 ರನ್ ಗಳಿಸಿದ್ದಾರೆ. ಕೊಹ್ಲಿ ಇಂದಿನ ಐಪಿಎಲ್ ಪಂದ್ಯಕ್ಕೂ ಮೊದಲು 12,983 ರನ್ ಗಳಿಸಿದ್ದರು. ಕೊಹ್ಲಿ 42 ಎಸೆತಗಳಲ್ಲಿ 67 ರನ್ ಗಳಿಸಿ ಔಟಾದರು.* ರೋಹಿತ್ ಶರ್ಮ (4,231 ರನ್) ಮತ್ತು ಪಾಕಿಸ್ಥಾನದ ಬಾಬರ್ ಅಜಮ್ (4,223) ನಂತರ ಕೊಹ್ಲಿ ಟಿ 20 ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.* ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ರೋಹಿತ್ ಶರ್ಮ ಎರಡನೇ ಸ್ಥಾನದಲ್ಲಿದ್ದಾರೆ. 451 ಪಂದ್ಯಗಳಲ್ಲಿ 11,851 ರನ್ ಗಳಿಸಿದ್ದಾರೆ.* ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿ : - ದೈತ್ಯ ಕ್ರಿಸ್ ಗೇಲ್ 463 ಪಂದ್ಯಗಳಲ್ಲಿ 14,562 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ- ಅಲೆಕ್ಸ್ ಹೇಲ್ಸ್ 13,610 ರನ್ಗಳೊಂದಿಗೆ ಎರಡನೇ ಸ್ಥಾನ - ಶೋಯೆಬ್ ಮಲಿಕ್ 555 ಪಂದ್ಯಗಳಲ್ಲಿ 13,557 ರನ್ಗಳೊಂದಿಗೆ ಮೂರನೇ ಸ್ಥಾನ - ಪೊಲಾರ್ಡ್ 695 ಪಂದ್ಯಗಳಲ್ಲಿ 13,537 ರನ್ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
* ರಾಟ್ ಕೊಹ್ಲಿ ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ 2025 ವಿಜೇತ ತಂಡದ ಭಾಗವಾಗಿದ್ದರು. 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ, 2024ರ ಟಿ20 ವಿಶ್ವಕಪ್ ಅನ್ನು ಸಹ ಗೆದ್ದಿದ್ದಾರೆ. ಒಂದು ದಶಕದಲ್ಲಿ 20,000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.* ಅವರ ವೃತ್ತಿಜೀವನದ ಅವಧಿಯಲ್ಲಿ, ಅವರು 10 ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದು ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆದ ಆಟಗಾರನನ್ನಾಗಿ ಮಾಡಿದೆ. ಅವರು 2012, 2017, 2018 ಮತ್ತು 2023 ರಲ್ಲಿ ನಾಲ್ಕು ಬಾರಿ ವರ್ಷದ ಏಕದಿನ ಆಟಗಾರರಾಗಿದ್ದರು.