* ಅಫ್ಘಾನಿಸ್ತಾನದ ಸ್ಪಿನ್ ಮೋಡಿಗಾರ ರಶೀದ್ ಖಾನ್ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಶಾರ್ಜಾದಲ್ಲಿ ನಡೆದ ಯುಎಇ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಕಬಳಿಸುವ ಮೂಲಕ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ.* ಇದಕ್ಕೂ ಮೊದಲು ಈ ದಾಖಲೆ ನ್ಯೂಝಿಲೆಂಡ್ ವೇಗಿ ಟಿಮ್ ಸೌಥಿ ಹೆಸರಿನಲ್ಲಿತ್ತು. 123 ಇನಿಂಗ್ಸ್ಗಳಲ್ಲಿ 164 ವಿಕೆಟ್ಗಳನ್ನು ಪಡೆದಿದ್ದ ಸೌಥಿಯನ್ನು ರಶೀದ್ ಖಾನ್ ಮೀರಿದ್ದಾರೆ.* 2015 ರಿಂದ ಟಿ20 ಕ್ರಿಕೆಟ್ ಆಡುತ್ತಿರುವ ರಶೀದ್ ಖಾನ್, 98 ಪಂದ್ಯಗಳಲ್ಲಿ 165 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದರೊಂದಿಗೆ ಹೊಸ ಇತಿಹಾಸ ನಿರ್ಮಿಸಿದ್ದಾರೆ.* ಟಿ20 ಅಂತಾರಾಷ್ಟ್ರೀಯಗಳ ಜೊತೆಗೆ ಲೀಗ್ಗಳನ್ನು ಸೇರಿಸಿ ನೋಡಿದರೆ, ರಶೀದ್ ಖಾನ್ 484 ಇನಿಂಗ್ಸ್ಗಳಲ್ಲಿ 661 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ.* ಟಿ20 ಇತಿಹಾಸದಲ್ಲೇ 650ಕ್ಕೂ ಹೆಚ್ಚು ವಿಕೆಟ್ ಪಡೆದ ಏಕೈಕ ಬೌಲರ್ ಎಂಬ ದಾಖಲೆ ಕೂಡ ಅವರದೇ ಆಗಿದೆ.