* ಇಂಗ್ಲೆಂಡ್ ಅಲೆಕ್ಸ್ ಹೇಲ್ಸ್ ಟಿ20 ಕ್ರಿಕೆಟ್ನಲ್ಲಿ ಅಬ್ಬರ ಮುಂದುವರಿಸಿಕೊಂಡು ಹೋಗಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2025) ಪಂದ್ಯದಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ವಿರುದ್ಧ 43 ಎಸೆತಗಳಲ್ಲಿ 74 ರನ್ ಬಾರಿಸಿ ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ.* ಈ ಅಬ್ಬರದ ಅರ್ಧಶತಕದೊಂದಿಗೆ ಹೇಲ್ಸ್ ಟಿ20 ಕ್ರಿಕೆಟ್ನಲ್ಲಿ 14,000 ರನ್ಗಳನ್ನು ಪೂರೈಸಿದ್ದಾರೆ. ಇಂಗ್ಲೆಂಡ್ ಪರ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಆಗಿರುವ ಹೇಲ್ಸ್, ವಿಶ್ವದಲ್ಲಿ 3ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.* ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ದಾಖಲೆಯು ವೆಸ್ಟ್ ಇಂಡೀಸ್ ದಂತಕಥೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. 455 ಇನಿಂಗ್ಸ್ಗಳಲ್ಲಿ 14,562 ರನ್ ಬಾರಿಸಿದ ಗೇಲ್ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರ ಕೀರನ್ ಪೊಲಾರ್ಡ್ 14,012 ರನ್ಗಳನ್ನು ಗಳಿಸಿದ್ದಾರೆ.* ಇದೀಗ ಹೇಲ್ಸ್ 505 ಇನಿಂಗ್ಸ್ಗಳಲ್ಲಿ 14,024 ರನ್ಗಳನ್ನು ಬಾರಿಸಿ ಪೊಲಾರ್ಡ್ ಅವರನ್ನು ಹಿಂದಿಕ್ಕಿದ್ದಾರೆ. ಹೀಗಾಗಿ ಟಿ20 ಇತಿಹಾಸದಲ್ಲಿ ಗೇಲ್ ನಂತರ ಅತ್ಯಧಿಕ ರನ್ಗಳಿಸಿದ 2ನೇ ಬ್ಯಾಟರ್ ಆಗಿದ್ದಾರೆ.* ಹೊಸ ದಾಖಲೆ ಬರೆಯಲು ಹೇಲ್ಸ್ಗೆ ಇನ್ನೂ 539 ರನ್ಗಳು ಬೇಕಿದ್ದು, ಮುಂದಿನ ಟಿ20 ಲೀಗ್ಗಳಲ್ಲಿ ಗೇಲ್ರ ವಿಶ್ವ ದಾಖಲೆ ಮುರಿಯುವ ನಿರೀಕ್ಷೆ ಹೆಚ್ಚಾಗಿದೆ.