* ಅಫಘಾನಿಸ್ತಾನ ತಂಡದ ಸ್ಪಿನ್ನರ್ ರಶೀದ್ ಖಾನ್ ಅವರು ಟಿ20 ಕ್ರಿಕೆಟ್ನಲ್ಲಿ 650 ವಿಕೆಟ್ಗಳನ್ನು ಕಬಳಿಸಿ ಇತಿಹಾಸ ನಿರ್ಮಿಸಿದ್ದಾರೆ. ಇದು ಟಿ20 ಕ್ರಿಕೆಟ್ನಲ್ಲಿ ಈ ಮಟ್ಟದ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.* ಆಗಸ್ಟ್ 5 ರಂದು ಲಾರ್ಡ್ಸ್ನಲ್ಲಿ ನಡೆದ ದಿ ಹಂಡ್ರೆಡ್ ಪಂದ್ಯದಲ್ಲಿ ಓವಲ್ ಇನ್ವಿನ್ಸಿಬಲ್ಸ್ ಪರ 3 ವಿಕೆಟ್ ಕಬಳಿಸಿ ಈ ದಾಖಲೆ ನಿರ್ಮಿಸಿದರು. ಅವರು ಲಂಡನ್ ಸ್ಪಿರಿಟ್ ತಂಡವನ್ನು ಕೇವಲ 80 ರನ್ಗಳಿಗೆ ಆಲಿಸು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.* ರಶೀದ್ ಖಾನ್ ಅವರು 478 ಇನಿಂಗ್ಸ್ಗಳಲ್ಲಿ 18.54ರ ಸರಾಸರಿಯಲ್ಲಿ 651 ವಿಕೆಟ್ಗಳನ್ನು ಪಡೆದಿದ್ದಾರೆ. ಇದರಲ್ಲಿ ನಾಲ್ಕು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ.* ಈ ಪಂದ್ಯದಲ್ಲಿ 11 ರನ್ ನೀಡಿ 3 ವಿಕೆಟ್ ಕಬಳಿಸಿದ್ದ ರಶೀದ್ ಖಾನ್ಗೆ ‘ಹೀರೋ ಆಫ್ ದಿ ಮ್ಯಾಚ್’ ಪ್ರಶಸ್ತಿ ಲಭಿಸಿತು. ಈ ಟೂರ್ನಿಯಲ್ಲಿ ಒಟ್ಟು 5 ವಿಕೆಟ್ಗಳನ್ನೂ ಕಬಳಿಸಿದ್ದಾರೆ.* 2025ರ ಐಪಿಎಲ್ನಲ್ಲಿ 15 ಪಂದ್ಯಗಳಿಂದ ಕೇವಲ 9 ವಿಕೆಟ್ಗಳನ್ನು ಪಡೆದಿದ್ದ ಅವರು, ದಿ ಹಂಡ್ರೆಡ್ನಲ್ಲಿ ಮತ್ತೆ ತಮ್ಮ ಉತ್ತಮ ಫಾರ್ಮ್ಗೆ ಮರಳಿದ್ದಾರೆ.