* ಭಾರತದ ಯುವ ನಾಯಕ ಶುಭಮನ್ ಗಿಲ್ ಅವರು ತಮ್ಮ ಟೆಸ್ಟ್ ನಾಯಕತ್ವದ ಕೇವಲ ಎರಡನೇ ಪಂದ್ಯದಲ್ಲೇ ವಿಶಿಷ್ಟ ಸಾಧನೆ ಮಾಡಿದ್ದಾರೆ.* ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ, ಅವರು 387 ಎಸೆತಗಳನ್ನು ಎದುರಿಸಿ 30 ಬೌಂಡರಿ ಮತ್ತು 3 ಸಿಕ್ಸ್‌ಗಳೊಂದಿಗೆ 269 ರನ್ ಗಳಿಸಿದರು.* ಈ ಮೂಲಕ ಗಿಲ್ ಏಕದಿನ ಮತ್ತು ಟೆಸ್ಟ್ ಎರಡೂ ಮಾದರಿಗಳಲ್ಲಿ ಇನಿಂಗ್ಸ್‌ವೊಂದರಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಐದನೇ ಬ್ಯಾಟರ್ ಎಂಬ ದಾಖಲೆ ಮುಡಿಗೇರಿಸಿಕೊಂಡಿದ್ದಾರೆ.* ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್, ಹಾಗೂ ರೋಹಿತ್ ಶರ್ಮಾ. ಇವರಂತೆ ಗಿಲ್ ಕೂಡ ಎರಡು ಮಾದರಿಗಳಲ್ಲಿ ದ್ವಿಶತಕ ಬಾರಿಸಿ ವಿಶಿಷ್ಟ ಗುಂಪಿಗೆ ಸೇರಿದ್ದಾರೆ.* ಗಿಲ್ ಈ ಹಿಂದೆ 2023ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 208 ರನ್ ಬಾರಿಸಿದ್ದರು.* ಪಂದ್ಯವಿಚಾರಕ್ಕೆ ಬಂದ್ರೆ, ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಮೊದಲ ಇನಿಂಗ್ಸ್‌ನಲ್ಲಿ 587 ರನ್‌ಗಳ ಭಾರೀ ಮೊತ್ತ ಕಲೆಹಾಕಿದೆ.* ಗಿಲ್ ಅವರೊಂದಿಗೆ ಯಶಸ್ವಿ ಜೈಸ್ವಾಲ್ (87) ಹಾಗೂ ರವೀಂದ್ರ ಜಡೇಜಾ (87) ಉತ್ತಮ ಕೊಡುಗೆ ನೀಡಿದ್ದಾರೆ.* ಇಂಗ್ಲೆಂಡ್ ಪ್ರತುತ್ತರದ ಆರಂಭದಲ್ಲಿ ನಲುಗಿದಂತಾಗಿದೆ. ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿದೆ. ಜೋ ರೂಟ್ (18) ಮತ್ತು ಹ್ಯಾರಿ ಬ್ರೂಕ್ (30) ಕ್ರೀಸ್‌ನಲ್ಲಿದ್ದಾರೆ.* ಮೂರನೇ ದಿನದಾಟ ಭಾರತಕ್ಕೆ ಹೆಚ್ಚು ಪ್ರಬಲ ಮುನ್ನಡೆ ನೀಡಬಹುದಾದ ನಿರೀಕ್ಷೆಯಿದೆ.