* ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. 14 ವರ್ಷಗಳ ವೃತ್ತಿಜೀವನದ ನಂತರ, ಅವರು ಈ ಸ್ವರೂಪಕ್ಕೆ ವಿದಾಯ ಹೇಳುತ್ತಿದ್ದಾರೆ.* ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಟೆಕ್ಸ್ ಕ್ರಿಕೆಟ್ಗೆ ವಿದಾಯದ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. * ಟೆಸ್ಟ್ ಕ್ರಿಕೆಟ್ನಲ್ಲಿ ನಾನು ಮೊದಲ ಬಾರಿಗೆ ಗುಡ್ಡೆಯ ನೀಲಿ ಜರ್ಸಿ ಧರಿಸಿ 14 ವರ್ಷಗಳಾಗಿವೆ. ನಿಜವಾಗಿಯೂ, ಇದು ನನ್ನನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿದೆ, ರೂಪಿಸಿದೆ ಮತ್ತು ಜೀವನಪೂರ್ತಿ ನೆನಪಿನಲ್ಲಿರುವ ಪಾಠಗಳನ್ನು ಕಲಿಸಿದೆ.ಬಿಳಿಯ ಉಡುಪಿನಲ್ಲಿ ಆಡುವುದರಲ್ಲಿ ಏನೋ ಆತ್ಮೀಯವಾದದ್ದು ಇದೆ. ಸದ್ದಿಲ್ಲದ ಕಠಿಣ ಶ್ರಮ, ದೀರ್ಘ ದಿನಗಳು, ಯಾರಿಗೂ ಕಾಣದ ಆದರೆ ಶಾಶ್ವತವಾಗಿ ನಿಮ್ಮೊಂದಿಗಿರುವ ಸಣ್ಣ ಕ್ಷಣಗಳು.ಇದರಿಂದ ದೂರವಾಗುತ್ತಿರುವಾಗ, ಇದು ಸುಲಭವಲ್ಲ ಅಂತ ಗೊತ್ತಿದ್ದರೂ ಕೂಡ ನನಗೆ ಇದು ಸರಿಯೆನಿಸುತ್ತದೆ. ನಾನು ಎಲ್ಲವನ್ನೂ ನೀಡಿದ್ದೇನೆ, ಇದು ನಾನು ಆಶಿಸಿದ್ದಕ್ಕಿಂತ ಎಷ್ಟೋ ಹೆಚ್ಚಿನದನ್ನು ನನಗೆ ನೀಡಿದೆ.ಆಟಕ್ಕಾಗಿ, ನಾನು ಮೈದಾನದಲ್ಲಿ ಹಂಚಿಕೊಂಡ ಜನರಿಗಾಗಿ, ಮತ್ತು ನನ್ನನ್ನು ಗಮನಿಸಿದ ಪ್ರತಿಯೊಬ್ಬ ವ್ಯಕ್ತಿಗಾಗಿ ನಾನು ಕೃತಜ್ಞತೆಯಿಂದ ತುಂಬಿದ ಹೃದಯದೊಂದಿಗೆ ಹೊರನಡೆಯುತ್ತಿದ್ದೇನೆ.ನಾನು ಯಾವಾಗಲೂ ನನ್ನ ಟೆಸ್ಟ್ ವೃತ್ತಿಜೀವನವನ್ನು ಖುಷಿಯೊಂದಿಗೆ ನೆನಪಿಸಿಕೊಳ್ಳುತ್ತೇನೆ.* ಜೂನ್ 20ರಿಂದ ಇಂಗ್ಲೆಂಡ್ ಪ್ರವಾಸ ಆರಂಭವಾಗುವ ಮೊದಲು ಬಿಸಿಸಿಐಗೆ ತಮ್ಮ ನಿವೃತ್ತಿಯ ನಿರ್ಧಾರವನ್ನು ತಿಳಿಸಿದ್ದರು.* 68 ಟೆಸ್ಟ್ಗಳಿಗೆ ನಾಯಕತ್ವವಹಿಸಿ 40 ಗೆಲುವು ದಾಖಲಿಸಿದ ಅವರು ಭಾರತದಲ್ಲಿ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿದ್ದರೆ. ಅವರ ನಾಯಕತ್ವದಲ್ಲಿ ಭಾರತವು ಟೆಸ್ಟ್ ಕ್ರಿಕೆಟ್ನಲ್ಲಿ ಪ್ರಾಬಲ್ಯವನ್ನು ಸಾಧಿಸಿತು.* 123 ಟೆಸ್ಟ್ ಪಂದ್ಯಗಳಲ್ಲಿ 9,230 ರನ್ಗಳು, 30 ಶತಕಗಳ ಸಾಧನೆ ಮಾಡಿದ್ದಾರೆ.* ಇತ್ತೀಚಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಹಾಗೂ 5 ವರ್ಷಗಳ ಫಾರ್ಮ್ ಕುಸಿತ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.* ಬಿಸಿಸಿಐ ಹಾಗೂ ಮಾಜಿ ಕ್ರಿಕೆಟಿಗರು ಕೊಹ್ಲಿಯನ್ನು ಮರುಪರಿಶೀಲನೆಗಾಗಿ ಮನವೊಲಿಸಲು ಪ್ರಯತ್ನಿಸಿದರು, ಆದರೆ ಕೊಹ್ಲಿ ತಮ್ಮ ನಿರ್ಧಾರವನ್ನು ಬದಲಾಯಿಸಿಲ್ಲ. .* ಯುವ ಆಟಗಾರರಾದ ಶುಭಮನ್ ಗಿಲ್, ಜೈಸ್ವಾಲ್, ಕೆಎಲ್ ರಾಹುಲ್, ಪಂತ್ರಂತಹ ಆಟಗಾರರ ಮೇಲೆ ಆಧಾರವಾಗಿದೆ.