* ಪ್ರಧಾನಿ ನರೇಂದ್ರ ಮೋದಿ ಮತ್ತು ಎಲಾನ್ ಮಸ್ಕ್ ಇತ್ತೀಚೆಗೆ ಅಮೆರಿಕದಲ್ಲಿ ಚರ್ಚೆ ನಡೆಸಿದ ಬಳಿಕ ಬ್ಯಾಟರಿ ಚಾಲಿತ ವಾಹನ ಉತ್ಪಾದನಾ ಕಂಪನಿ ಟೆಸ್ಲಾ ದೇಶದಲ್ಲಿ ತನ್ನ ವ್ಯಾಪಾರ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ವಿಶ್ಲೇಷಕರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ತನ್ನ ವೆಬ್ಸೈಟ್ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.* ಇದು ಮಸ್ಕ್ ಒಡೆತನದ ಈ ಕಂಪನಿಯು ಶೀಘ್ರವೇ ಭಾರತದ ಇವಿ ಮಾರುಕಟ್ಟೆ ಪ್ರವೇಶಿಸುವ ಸೂಚನೆ ಎನ್ನಲಾಗಿದೆ.* ಮುಂಬಯಿ ಉಪನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸೇವಾ ಸಲಹೆಗಾರ, ಬಿಡಿಭಾಗಗಳ ಸಲಹೆಗಾರ, ಟೆಕ್ನಿಷಿಯನ್, ಮ್ಯಾನೇಜರ್, ಸ್ಟೋರ್ ಮ್ಯಾನೇಜರ್, ಮಾರಾಟ ವಿಭಾಗದ ಮ್ಯಾನೇಜರ್, ವಾಹನ ವಿತರಣಾ ತಜ್ಞರು ಸೇರಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಪ್ರಕಟಿಸಿದೆ.* ಕೇಂದ್ರ ಸರ್ಕಾರ ಹೊಸ ವಿದ್ಯುತ್ ವಾಹನ ನೀತಿಯನ್ನು ಘೋಷಿಸಿದ್ದು, ಕನಿಷ್ಠ 500 ಮಿಲಿಯನ್ ಡಾಲರ್ (4,350 ಕೋಟಿ ರೂ.) ಹೂಡಿಕೆಯೊಂದಿಗೆ ದೇಶದಲ್ಲಿ ಉತ್ಪಾದನಾ ಕೇಂದ್ರ ಸ್ಥಾಪಿಸುವ ಕಂಪನಿಗಳಿಗೆ ಆಮದು ತೆರಿಗೆಯಲ್ಲಿ ಸಡಿಲಿಕೆ ಒದಗಿಸಿದೆ. ಇದರಿಂದ ಟೆಸ್ಲಾ ಪ್ರೋತ್ಸಾಹಿತರಾಗುತ್ತದೆ ಎಂದು ಹೂಡಿಕೆ ಪರಿಣತರು ವಿಶ್ಲೇಷಿಸಿದ್ದಾರೆ.