* ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಕ್ರಾಂತಿ ತಂದಿರುವ ಅಮೆರಿಕದ ಪ್ರತಿಷ್ಠಿತ ಕಂಪನಿ ಟೆಸ್ಲಾ, ಭಾರತದಲ್ಲಿ ತನ್ನ ಮೊದಲ ಶೋರೂಮ್ ಅನ್ನು ಮುಂಬೈನ ಪ್ರಖ್ಯಾತ ಬಿಕೆಸಿ (ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್)ಯಲ್ಲಿ ಆರಂಭಿಸಲು ಸಿದ್ಧವಾಗಿದೆ. ಇದರಿಂದ ಟೆಸ್ಲಾ ಭಾರತದ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಲು ಮುಂದಾಗಿದೆ.* ಬಿಕೆಸಿಯ ವಾಣಿಜ್ಯ ಸಂಕೀರ್ಣದ ನೆಲ ಮಹಡಿಯಲ್ಲಿ 4,000 ಚದರ ಅಡಿ ವಿಸ್ತೀರ್ಣದ ಶೋರೂಮ್ ತೆರೆಯಲಾಗುತ್ತಿದೆ. ಐದು ವರ್ಷಗಳ ಬಾಡಿಗೆ ಒಪ್ಪಂದದಡಿ, ಟೆಸ್ಲಾ ತಿಂಗಳಿಗೆ 35 ಲಕ್ಷ ರೂ. ಪಾವತಿಸಲಿದೆ.* ಟೆಸ್ಲಾ ಮುಂಬೈ ಬಳಿಕ ದೆಹಲಿಯಲ್ಲೂ ತನ್ನ ಎರಡನೇ ಶೋರೂಮ್ ತೆರೆಯುವ ಸಾಧ್ಯತೆ ಇದೆ. ಎಲಾನ್ ಮಸ್ಕ್ ಮತ್ತು ಪ್ರಧಾನಿ ಮೋದಿ ಭೇಟಿಯ ಬಳಿಕ, ಟೆಸ್ಲಾ ಭಾರತದಲ್ಲಿ 13 ಹುದ್ದೆಗಳ ನೇಮಕಾತಿ ಆರಂಭಿಸಿತ್ತು. ಇದೀಗ ಮುಂಬೈನಲ್ಲೂ ಶೋರೂಮ್ ತೆರೆಯುವ ಮೂಲಕ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಲು ಟೆಸ್ಲಾ ಮುಂದಾಗಿದೆ.* ಟೆಸ್ಲಾ ತನ್ನ ಅತ್ಯಾಧುನಿಕ ಎಲೆಕ್ಟ್ರಿಕ್ ಕಾರುಗಳನ್ನು ಪ್ರದರ್ಶಿಸಲು ಶೋರೂಮ್ ತೆರೆಯುತ್ತಿದೆ, ಇದರಿಂದ ಭಾರತೀಯ ಟೆಸ್ಲಾ ಗ್ರಾಹಕರು ಅನುಭವ ಪಡೆಯಲು ಮತ್ತು ಮಾಹಿತಿಯನ್ನು ತಿಳಿದುಕೊಳ್ಳಲು ಅವಕಾಶ ಪಡೆಯುತ್ತಾರೆ.