* ಕಾಮನ್‌ವೆಲ್ತ್ ಗೇಮ್ಸ್ ಮಿಶ್ರ ಡಬಲ್ಸ್ ಚಾಂಪಿಯನ್ ಶ್ರೀಜಾ ಅಕುಲಾ ಅವರು ಏಪ್ರಿಲ್ 23 ರಂದು (ಮಂಗಳವಾರ) ಬಿಡುಗಡೆಯಾದ ಇತ್ತೀಚಿನ ITTF ವಿಶ್ವ ಶ್ರೇಯಾಂಕದಲ್ಲಿ ಭಾರತದ ಅಗ್ರ ಶ್ರೇಯಾಂಕದ ಮಹಿಳಾ ಟೇಬಲ್-ಟೆನಿಸ್ ಆಟಗಾರ್ತಿಯಾಗಿ ಮಣಿಕಾ ಬಾತ್ರಾ ಅವರನ್ನು ಬದಲಾಯಿಸಿದ್ದಾರೆ. * ಶ್ರೀಜಾ ವೃತ್ತಿಜೀವನದ ಉನ್ನತ ಶ್ರೇಣಿಯ 38 ಕ್ಕೆ ಸ್ಥಾನಕ್ಕೆ ಏರಿದರೆ, ಮಣಿಕಾ ಬಾತ್ರಾ ಒಂದೆರಡು ಸ್ಥಾನಗಳ ಕೆಳಗೆ ಇಳಿದು 39 ನೇ ಸ್ಥಾನದಲ್ಲಿದ್ದಾರೆ.* ಶರತ್ ಕಮಲ್ ಪುರುಷರ ವಿಭಾಗದಲ್ಲಿ ಭಾರತದ ಆಟಗಾರರ ಪೈಕಿ ಮುಂಚೂಣಿಯಲ್ಲಿದ್ದು 37ನೇ ಸ್ಥಾನದಲ್ಲಿದ್ದಾರೆ. ಜಿ.ಸತ್ಯನ್ ಮತ್ತು ಮಾನವ್ ಠಕ್ಕರ್ ಅವರು 60 ಮತ್ತು 61ನೇ ಸ್ಥಾನದಲ್ಲಿದ್ದಾರೆ. ರಾಷ್ಟ್ರೀಯ ಚಾಂಪಿಯನ್ ಹರ್ಮಿತ್ ದೇಸಾಯಿ ಅವರು 64ನೇ ಸ್ಥಾನಕ್ಕೆ ಸರಿದಿದ್ದಾರೆ. * ಭಾರತ ಟೇಬಲ್ ಟೆನಿಸ್ ಫೆಡರೇಷನ್, ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಎರಡು ಸಿಂಗಲ್ಸ್ ಪ್ರವೇಶಗಳನ್ನು ಮೇ 16ರೊಳಗೆ ಆಗಿನ ವಿಶ್ವ ಬ್ಯಾಂಕಿಂಗ್ ಪರಿಗಣಿಸಿ ನಿರ್ಧರಿಸಬೇಕಾಗಿದೆ.* ಶ್ರೀಜಾ ಅವರು 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅನುಭವಿ ಶರತ್ ಕಮಲ್ ಅವರೊಂದಿಗೆ ಮಿಶ್ರ ಡಬಲ್ಸ್ ಚಿನ್ನದ ಪದಕವನ್ನು ಗೆದ್ದಿದ್ದರು. ಯಶಸ್ವಿನಿ ಘೋರ್ಪಡೆ ಮತ್ತು ಅರ್ಚನಾ ಕಾಮತ್ ರ‍್ಯಾಂಕಿಂಗ್‌ನಲ್ಲಿ 99 ಮತ್ತು 100ನೇ ಸ್ಥಾನ ಕಾಯ್ದುಕೊಂಡಿದ್ದಾರೆ.