Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಟಾಟಾ ಕಮ್ಯುನಿಕೇಷನ್ಸ್ನ ನೂತನ ಎಂಡಿ ಮತ್ತು ಸಿಇಒ ಆಗಿ ಗಣೇಶ್ ಲಕ್ಷ್ಮೀನಾರಾಯಣನ್ ನೇಮಕ
Authored by:
Akshata Halli
Date:
23 ಜನವರಿ 2026
➤
ಜಾಗತಿಕ ಡಿಜಿಟಲ್ ಪರಿಸರ ವ್ಯವಸ್ಥೆಯ ಪ್ರಮುಖ ಸಂಸ್ಥೆಯಾದ
ಟಾಟಾ ಕಮ್ಯುನಿಕೇಷನ್ಸ್ (Tata Communications)
, ಏರ್ಟೆಲ್ನ ಮಾಜಿ ಹಿರಿಯ ಅಧಿಕಾರಿ
ಗಣೇಶ್ ಲಕ್ಷ್ಮೀನಾರಾಯಣನ್
ಅವರನ್ನು ಕಂಪನಿಯ ಮುಂದಿನ ಮ್ಯಾನೇಜಿಂಗ್ ಡೈರೆಕ್ಟರ್ (MD) ಮತ್ತು ಸಿಇಒ (CEO-Designate) ಆಗಿ ನೇಮಕ ಮಾಡಿದೆ. ಪ್ರಸ್ತುತ ಎಂಡಿ ಮತ್ತು ಸಿಇಒ ಆಗಿರುವ
ಎ.ಎಸ್. ಲಕ್ಷ್ಮೀನಾರಾಯಣನ್
ಅವರು ಏಪ್ರಿಲ್ 13, 2026 ರಂದು ನಿವೃತ್ತರಾಗಲಿದ್ದು, ಅವರ ನಂತರ ಗಣೇಶ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
➤ ಗಣೇಶ್ ಲಕ್ಷ್ಮೀನಾರಾಯಣನ್ :
ಗಣೇಶ್ ಅವರು ಅಂತರಾಷ್ಟ್ರೀಯ ನಿರ್ವಹಣಾ ಕ್ಷೇತ್ರದಲ್ಲಿ 30 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ. ಇವರು ಈ ಹಿಂದೆ 'ಸರ್ವಿಸ್ನೌ' (ServiceNow) ಇಂಡಿಯಾ ಮತ್ತು ಸಾರ್ಕ್ (SAARC) ವಲಯದ ಎಂಡಿ ಹಾಗೂ ಗ್ರೂಪ್ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯನಿರ್ವಹಿಸಿದ್ದರು. ಏರ್ಟೆಲ್ ಬಿಸಿನೆಸ್ನ ಸಿಇಒ ಆಗಿ ಇವರ ಸಾಧನೆ ಗಮನಾರ್ಹ. ಇವರ ನೇತೃತ್ವದಲ್ಲಿ ಏರ್ಟೆಲ್ನ ಎಂಟರ್ಪ್ರೈಸ್ ವ್ಯವಹಾರವು ಮೂರು ವರ್ಷಗಳಲ್ಲಿ 50% ಬೆಳವಣಿಗೆಯನ್ನು ಕಂಡಿತ್ತು. ಇವರು ಎರಡು ಬಾರಿ
NASSCOM
ಕಾರ್ಯಕಾರಿ ಮಂಡಳಿಗೆ ಆಯ್ಕೆಯಾಗಿದ್ದಾರೆ ಮತ್ತು ಫಿಕ್ಕಿ (FICCI) ಕೌನ್ಸಿಲ್ನಲ್ಲಿ ಸೇವೆ ಸಲ್ಲಿಸಿದ್ದಾರೆ.
ಶೈಕ್ಷಣಿಕ ಅರ್ಹತೆ:
ಇವರು ಚೆನ್ನೈನ ಗಿಂಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಚಿನ್ನದ ಪದಕದೊಂದಿಗೆ ಬಿ.ಎಸ್ (BS) ಪದವಿ ಪಡೆದಿದ್ದಾರೆ. ಮತ್ತು ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದ ರಾಸ್ ಸ್ಕೂಲ್ ಆಫ್ ಬಿಸಿನೆಸ್ನಿಂದ ಎಂಬಿಎ (MBA) ಪದವಿ ಪಡೆದಿದ್ದಾರೆ.
➤
ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್
ಟಾಟಾ ಸಮೂಹದ ಪ್ರಮುಖ ಅಂಗಸಂಸ್ಥೆಯಾಗಿದ್ದು, ಇದು ಜಾಗತಿಕ ಮಟ್ಟದಲ್ಲಿ ಡಿಜಿಟಲ್ ಮೂಲಸೌಕರ್ಯ ಮತ್ತು ಸಂವಹನ ತಂತ್ರಜ್ಞಾನ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಈ ಸಂಸ್ಥೆಯು ಮೂಲತಃ 1986 ರಲ್ಲಿ ಭಾರತ ಸರ್ಕಾರದ ಅಡಿಯಲ್ಲಿ
ವಿದೇಶ ಸಂಚಾರ್ ನಿಗಮ್ ಲಿಮಿಟೆಡ್ (VSNL)
ಆಗಿ ಸ್ಥಾಪನೆಯಾಯಿತು.2002 ರಲ್ಲಿ ಭಾರತ ಸರ್ಕಾರದ ಖಾಸಗೀಕರಣ ನೀತಿಯಡಿ ಟಾಟಾ ಸಮೂಹವು ಇದನ್ನು ಸ್ವಾಧೀನಪಡಿಸಿಕೊಂಡಿತು. 2008 ರಲ್ಲಿ ಇದರ ಹೆಸರನ್ನು ಅಧಿಕೃತವಾಗಿ
ಟಾಟಾ ಕಮ್ಯುನಿಕೇಷನ್ಸ್
ಎಂದು ಬದಲಾಯಿಸಲಾಯಿತು.
- ಪ್ರಧಾನ ಕಚೇರಿ:
ಮುಂಬೈ, ಮಹಾರಾಷ್ಟ್ರ.
-
ಟಾಟಾ ಕಮ್ಯುನಿಕೇಷನ್ಸ್ ಅಧ್ಯಕ್ಷರು:
ಎನ್. ಜಿ. ಸುಬ್ರಮಣ್ಯಂ.
Take Quiz
Loading...