Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವ: ಚಿನ್ನದ ನಾಣ್ಯದ ಮೇಲೆ ಟ್ರಂಪ್ ಚಿತ್ರ
Authored by:
Akshata Halli
Date:
23 ಮಾರ್ಚ್ 2026
➤
ಅಮೆರಿಕ ಸಂಯುಕ್ತ ಸಂಸ್ಥಾನವು ತನ್ನ 250ನೇ ಸ್ವಾತಂತ್ರ್ಯೋತ್ಸವದ (Sestercentennial) ಸಂಭ್ರಮದಲ್ಲಿದೆ. ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯವಾಗಿಸಲು ಅಮೆರಿಕ ಸರ್ಕಾರವು ವಿಶೇಷ
24 ಕ್ಯಾರೆಟ್ ಚಿನ್ನದ ನಾಣ್ಯವನ್ನು
ಬಿಡುಗಡೆ ಮಾಡಲು ನಿರ್ಧರಿಸಿದೆ. ಆದರೆ, ಈ ನಾಣ್ಯದ ಮೇಲೆ ಅಧ್ಯಕ್ಷ
ಡೊನಾಲ್ಡ್ ಟ್ರಂಪ್
ಅವರ ಭಾವಚಿತ್ರವನ್ನು ಮುದ್ರಿಸಲು ನಿರ್ಧರಿಸಿರುವುದು ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
➤
ನಾಣ್ಯದ ವಿಶೇಷತೆ:
ಅಮೆರಿಕದ ಹಣಕಾಸು ಸಚಿವ
ಬ್ರಾಂಡಾನ್ ಬೀಚ್
ಅವರ ಪ್ರಕಾರ, ಈ ನಾಣ್ಯವು ದೇಶದ ಅಚಲ ಚೈತನ್ಯ ಮತ್ತು ಪ್ರಜಾಪ್ರಭುತ್ವದ ಸಂಕೇತವಾಗಿದೆ. "ದೇಶದ ಇಂದಿನ ಶಕ್ತಿಯನ್ನು ಬಿಂಬಿಸಲು ಟ್ರಂಪ್ಗಿಂತ ಸೂಕ್ತ ವ್ಯಕ್ತಿ ಬೇರೊಬ್ಬರಿಲ್ಲ" ಎಂಬುದು ಆಡಳಿತ ಪಕ್ಷದ ವಾದ. ಮಾರ್ಚ್ 19ರ ವಿಭಾಗೀಯ ಸಭೆಯಲ್ಲಿ ಈ ವಿನ್ಯಾಸಕ್ಕೆ ಈಗಾಗಲೇ ಅನುಮೋದನೆ ದೊರೆತಿದೆ ಎನ್ನಲಾಗಿದೆ.
➤
ಕಾನೂನು ಅಡ್ಡಿ:
ಅಮೆರಿಕದ ಫೆಡರಲ್ ಕಾನೂನಿನ ಪ್ರಕಾರ,
ಜೀವಂತವಾಗಿರುವ ಯಾವುದೇ ವ್ಯಕ್ತಿಯ (Sitting President)
ಭಾವಚಿತ್ರವನ್ನು ದೇಶದ ಕರೆನ್ಸಿ ನೋಟುಗಳು ಅಥವಾ ನಾಣ್ಯಗಳ ಮೇಲೆ ಮುದ್ರಿಸುವಂತಿಲ್ಲ. ಈ ನಿಯಮವು ವ್ಯಕ್ತಿ ಪೂಜೆಯನ್ನು ತಡೆಯಲು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಜಾರಿಗೆ ತರಲಾಗಿತ್ತು.
➤
ಡೆಮಾಕ್ರಟ್ ಪಕ್ಷದ ಆಕ್ಷೇಪ:
ವಿರೋಧ ಪಕ್ಷವಾದ ಡೆಮಾಕ್ರಟಿಕ್ ನಾಯಕರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. "ನಾಣ್ಯಗಳ ಮೇಲೆ ಭಾವಚಿತ್ರಗಳನ್ನು ಮುದ್ರಿಸಿಕೊಳ್ಳುವುದು ರಾಜರು ಮತ್ತು ಸರ್ವಾಧಿಕಾರಿಗಳ ಲಕ್ಷಣವೇ ಹೊರತು ಪ್ರಜಾಪ್ರಭುತ್ವದ ನಾಯಕರದ್ದಲ್ಲ" ಎಂದು ಅವರು ಟೀಕಿಸಿದ್ದಾರೆ.
➤
1926ರಲ್ಲಿ:
ಅಮೆರಿಕದ 150ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ, ಅಂದಿನ 30ನೇ ಅಧ್ಯಕ್ಷರಾಗಿದ್ದ
ಕಾಲ್ವಿನ್ ಕೂಲೆಡ್ಜ್ (Calvin Coolidge)
ಅವರ ಭಾವಚಿತ್ರವನ್ನು ನಾಣ್ಯದ ಮೇಲೆ ಮುದ್ರಿಸಲಾಗಿತ್ತು. ಅವರು ಜೀವಂತವಿರುವಾಗಲೇ ನಾಣ್ಯದ ಮೇಲೆ ಕಾಣಿಸಿಕೊಂಡ ಮೊದಲ ಅಧ್ಯಕ್ಷರಾಗಿದ್ದರು. ಈಗ 100 ವರ್ಷಗಳ ನಂತರ ಟ್ರಂಪ್ ಆ ಹಾದಿ ತುಳಿಯುತ್ತಿದ್ದಾರೆ.
Take Quiz
Loading...