Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಹರ್ಮುಜ್ ಜಲಸಂಧಿ ಬಿಕ್ಕಟ್ಟು: ಇರಾನ್ಗೆ ಟ್ರಂಪ್ 48 ಗಂಟೆಗಳ ಗಡುವು!
Authored by:
Akshata Halli
Date:
23 ಮಾರ್ಚ್ 2026
➤
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ತಾರಕಕ್ಕೇರಿದೆ. ಇರಾನ್ನ ಹರ್ಮುಜ್ ಜಲಸಂಧಿ (Strait of Hormuz) ದಿಗ್ಬಂಧನ ಮತ್ತು ಇಸ್ರೇಲ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
- ಟ್ರಂಪ್ ಎಚ್ಚರಿಕೆ:
ಹರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ
48 ಗಂಟೆಗಳ ಕಾಲಾವಕಾಶ
ನೀಡಿದ್ದಾರೆ. ಒಂದು ವೇಳೆ ಜಲಸಂಧಿ ತೆರೆಯದಿದ್ದರೆ ಇರಾನ್ನ
ವಿದ್ಯುತ್ ಸ್ಥಾವರಗಳನ್ನು
ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.
- ಇರಾನ್ ಪ್ರತಿಕ್ರಿಯೆ:
ಇರಾನ್ನ ವೈರಿ ರಾಷ್ಟ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಹಡಗುಗಳ ಸಂಚಾರಕ್ಕೆ ಜಲಸಂಧಿ ಮುಕ್ತವಾಗಿದೆ ಎಂದು ಇರಾನ್ನ ಐಎಂಒ (IMO) ಪ್ರತಿನಿಧಿ ಅಲಿ ಮೌಸವಿ ತಿಳಿಸಿದ್ದಾರೆ.
- ಇಸ್ರೇಲ್ನ 'ಲಿಟಲ್ ಇಂಡಿಯಾ' ಮೇಲೆ ದಾಳಿ:
ದಕ್ಷಿಣ ಇಸ್ರೇಲ್ನ ಭಾರತೀಯರು ಹೆಚ್ಚಾಗಿ ವಾಸಿಸುವ
ಡಿಮೋನಾ (Dimona)
ಪಟ್ಟಣದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, 47 ಜನರು ಗಾಯಗೊಂಡಿದ್ದಾರೆ.
- ಯುದ್ಧಕ್ಕೆ ಬ್ರಿಟನ್ ಎಂಟ್ರಿ:
ಹಿಂದೂ ಮಹಾಸಾಗರದ ಅಮೆರಿಕ-ಬ್ರಿಟನ್ ಜಂಟಿ ಸೇನಾ ನೆಲೆ ಮೇಲೆ ಇರಾನ್ ದಾಳಿ ಮಾಡಿದ ಬೆನ್ನಲ್ಲೇ, ಬ್ರಿಟನ್ ತನ್ನ ಶಕ್ತಿಶಾಲಿ
ಎಚ್ಎಂಎಸ್ ಆನ್ಸನ್ (HMS Anson)
ಪರಮಾಣು ಜಲಾಂತರ್ಗಾಮಿಯನ್ನು ಅರಬ್ಬಿ ಸಮುದ್ರದಲ್ಲಿ ನಿಯೋಜಿಸಿದೆ.
➤
ಹರ್ಮುಜ್ ಜಲಸಂಧಿಯ ಮಹತ್ವ:
ಹರ್ಮುಜ್ ಜಲಸಂಧಿಯು ಜಗತ್ತಿನ ಅತ್ಯಂತ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾಗಿದೆ. ವಿಶ್ವದ ಒಟ್ಟು ತೈಲ ಬಳಕೆಯ ಸುಮಾರು
20% ಕ್ಕೂ ಹೆಚ್ಚು
ಭಾಗ ಈ ಕಿರಿದಾದ ಜಲಸಂಧಿಯ ಮೂಲಕವೇ ಸಾಗುತ್ತದೆ. ಇದು ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯನ್ನು ಸಂಪರ್ಕಿಸುತ್ತದೆ.
➤
ಬ್ರಿಟನ್ನ 'ಎಚ್ಎಂಎಸ್ ಆನ್ಸನ್' ಸಾಮರ್ಥ್ಯ:
ಬ್ರಿಟನ್ ನಿಯೋಜಿಸಿರುವ ಈ ಜಲಾಂತರ್ಗಾಮಿ ಅತ್ಯಂತ ಆಧುನಿಕವಾಗಿದ್ದು, ಈ ಕೆಳಗಿನ ಶಸ್ತ್ರಾಸ್ತ್ರಗಳನ್ನು ಹೊಂದಿದೆ:
- ಟೊಮಾಹಾಕ್ ಬ್ಲಾಕ್ IV ಕ್ಷಿಪಣಿಗಳು:
ಇವು 1,600 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ಧ್ವಂಸ ಮಾಡಬಲ್ಲವು.
- ಸ್ಪಿಯರ್ಫಿಶ್ ಟಾರ್ಪಿಡೊ:
ಶತ್ರು ಹಡಗುಗಳನ್ನು ನೀರಿನಡಿಯಲ್ಲೇ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
Take Quiz
Loading...