* ಗುಪ್ತಚರ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ತಪನ್ ದೇಕಾ ಅವರ ಸೇವಾವಧಿಗೆ ಮತ್ತೊಮ್ಮೆ ವಿಸ್ತರಣೆ ನೀಡಲಾಗಿದೆ.* 1988ರ ಬ್ಯಾಚ್ನ ಐಪಿಎಸ್ ಅಧಿಕಾರಿ ತಪನ್ ದೇಕಾ ಭಯೋತ್ಪಾದನೆ ಮತ್ತು ಮೂಲಭೂತವಾದ ಸಂಬಂಧಿತ ಪ್ರಕರಣಗಳ ತನಿಖೆಯಲ್ಲಿ ನಿಪುಣತೆ ಹೊಂದಿದ್ದಾರೆ.* ಮಂಗಳವಾರ ಹೊರಬಂದ ಆದೇಶದಂತೆ, ಕ್ಯಾಬಿನೆಟ್ ನೇಮಕಾತಿ ಸಮಿತಿಯು ದೇಕಾ ಅವರ ಸೇವಾವಧಿಯನ್ನು ಮತ್ತೊಂದು ವರ್ಷ ಅಥವಾ ಮುಂದಿನ ಆದೇಶದವರೆಗೆ 2026ರ ಜೂನ್ ವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ.* 2022ರಲ್ಲಿ ಅವರು ಎರಡು ವರ್ಷಗಳ ಅವಧಿಗೆ ಗುಪ್ತಚರ ಬ್ಯೂರೋ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಕಳೆದ ಜೂನ್ನಲ್ಲಿ ಈ ಅವಧಿಗೆ ಒಂದು ವರ್ಷದ ವಿಸ್ತರಣೆ ನೀಡಲಾಗಿತ್ತು.