* ಡೀಪ್ ಸೀಕ್ ಎಐ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಜನರೇಟಿವ್ ಎಐ ಕ್ಷೇತ್ರದಲ್ಲಿ ಚಾಟ್ಜಿಪಿಟಿಗೆ ಭಾರಿ ಸ್ಪರ್ಧೆ ನೀಡುತ್ತಿದೆ. ಕೇವಲ 50 ಕೋಟಿ ರೂಪಾಯಿಯಲ್ಲಿ ಅಭಿವೃದ್ಧಿಯಾಗಿರುವುದು ಎಐ ದೈತ್ಯರಿಗೆ ಅಚ್ಚರಿ ಮೂಡಿಸಿದೆ.* ಡೀಪ್ ಸೀಕ್ ಅನ್ನುವುದು ಓಪನ್ ಎಐ ಚಾಟ್ಜಿಪಿಟಿಯ ತದ್ರೂಪ. ಜನರೇಟಿವ್ ಎಐ ಆಗಿರುವ ಡೀಪ್ ಸೀಕ್, ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತದೆ, ಲೇಖನಗಳನ್ನು ಬರೆಯುತ್ತದೆ. ಆರೋಗ್ಯ ಸೇವೆಗಳ ಜತೆಗೆ ಹಣಕಾಸು ವಿಶ್ಲೇಷಣೆಯನ್ನೂ ಮಾಡುತ್ತದೆ.* ಚಾಟ್ ಜಿಪಿಟಿಗಿಂತ ಕೊಂಚ ಸುಧಾರಿತ ಜನರೇಟಿವ್ ಎಐ ಇದಾಗಿದೆ. ಆದರೆ ತನ್ನ ದೇಶ ಚೀನಾದ ಬಗ್ಗೆ ಮಾತ್ರ ಇದು ಪೂರ್ವಗ್ರಹಪೀಡಿತ ಮಾಹಿತಿಗಳನ್ನು ನೀಡುತ್ತದೆ ಅನ್ನುವ ಅಪವಾದ ಇದೆ.* ಡೀಪ್ ಸೀಕ್ ಕಡಿಮೆ ವೆಚ್ಚದ ಕಾರಣ ಗಮನ ಸೆಳೆದಿದೆ. ಇದರ ಪರಿಣಾಮವಾಗಿ ಎನ್ವಿಡಿಯಾ ಷೇರು ಮೌಲ್ಯ ಒಂದು ದಿನದಲ್ಲಿ ಶೇ.17ರಷ್ಟು ಕುಸಿಯಿತು. ಚೀನಾ ಪರವಾದ ಉತ್ತರಗಳೇ ಇಲ್ಲಿ ಲಭಿಸುತ್ತವೆ ಎನ್ನಲಾಗಿದೆ.* ಒಪನ್ ಎಐ ಚಾಟ್ಜಿಪಿಟಿಗೆ ನೂರಾರು ಕೋಟಿ ರೂ. ಖರ್ಚುಮಾಡಿದರೆ, ಡೀಪ್ ಸೀಕ್ ಕೆಲವೇ ಕೋಟಿ ರೂ.ಗಳಲ್ಲಿ ತನ್ನ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಆದರೆ ಡೀಪ್ ಸೀಕ್ ಚಾಟ್ಜಿಪಿಟಿಯನ್ನು ತನ್ನ ತರಬೇತಿಗಾಗಿ ಬಳಸಿದುದಾಗಿ ಆರೋಪಿಸಲಾಗಿದೆ.* ಓಪನ್ಎಐ ಸ್ಯಾಮ್ ಆಲ್ಟ್ಮ್ಯಾನ್ ನೇತೃತ್ವದಲ್ಲಿ, ಡೀಪ್ ಸೀಕ್ ತರಬೇತಿಗೆ ಡಿಲೇಶನ್ ತಂತ್ರವನ್ನು ಬಳಸಿರುವ ಪುರಾವೆಗಳು ಲಭ್ಯವಿವೆ. ಈ ತಂತ್ರವನ್ನು ಎಲ್ಎಲ್ಎಂ ಮಾದರಿಗಳ ತರಬೇತಿಗೆ ಡೆವಲಪರ್ಗಳು ಸಾಮಾನ್ಯವಾಗಿ ಉಪಯೋಗಿಸುತ್ತಾರೆ. ಹಾಗಾಗಿ, ಒಪನ್ ಎಐ ಮತ್ತು ಮೈಕ್ರೋಸಾಫ್ಟ್ ಡೀಪ್ ಸೀಕ್ ಬಗ್ಗೆ ತನಿಖೆ ಆರಂಭಿಸಿವೆ.* ಯೂರೋ ಕನ್ಸೂಮರ್ಸ್ ಸಂಸ್ಥೆ, ಡೀಪ್ ಸೀಕ್ ಕಂಪನಿಯ ವೈಯಕ್ತಿಕ ಡೇಟಾ ನಿರ್ವಹಣೆ ಬಗ್ಗೆ ಜಿಡಿಪಿಆರ್ ಉಲ್ಲಂಘನೆಯ ದೂರುವನ್ನು ಇಟಾಲಿಯನ್ ಡೇಟಾ ಸಂರಕ್ಷಣಾ ಪ್ರಾಧಿಕಾರಕ್ಕೆ ಸಲ್ಲಿಸಿದೆ. ಲಕ್ಷಾಂತರ ಇಟಾಲಿಯನ್ನರ ಡೇಟಾ ಅಪಾಯದಲ್ಲಿದೆ ಎಂದು ಪ್ರಾಧಿಕಾರ ಎಚ್ಚರಿಕೆ ನೀಡಿದ್ದು, ಡೀಪ್ ಸೀಕ್ಗೆ 20 ದಿನಗಳ ಪ್ರತಿಕ್ರಿಯಾ ಅವಧಿ ನೀಡಲಾಗಿದೆ. ಎನ್ಡಿಯಾ ಚಿಪ್ ಬಳಕೆಯ ಆರೋಪವೂ ಇದೆ.* ಡೀಪ್ ಸೀಕ್ ಎಐ ಕಂಪನಿಯ ಸ್ಥಾಪಕ ಲಿಯಾಂಗ್ ವೆಂಗ್ ಫೆನ್. 1985ರಲ್ಲಿ ಜನಿಸಿದ ಅವರು, 2013ರಲ್ಲಿ ಹೂಡಿಕೆಗೆ ಸಂಬಂಧಿಸಿದ ಹಾಂಗ್ಚೌ ಯಕೇಬಿ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಕಂಪನಿ ಮೂಲಕ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು.* ಹಣಕಾಸು ಮಾರುಕಟ್ಟೆಯಲ್ಲಿ ಎಐ ಅಳವಡಿಕೆ, ಅಲ್ದಾರಿದಮ್ ತಿಳಿಯಲು 2015ರಲ್ಲಿ ಹೈ-ಫರ್ ಎಂಬ ಎಐ ಆಧಾರಿತ ಕಂಪನಿ ಸ್ಥಾಪಿಸಿದರು. 2023ರಲ್ಲಿ ಡೀಪ್ ಸೀಕ್ ಎಐ ಕಂಪನಿ ಆರಂಭಿಸಿದ ಲಿಯಾಂಗ್, ಎಐ ಆಧರಿತ ಡೀಪ್ ಸೀಕ್ ಆ್ಯಪ್ನ ಅಪ್ಡೇಟ್ ವರ್ಶನ್ 2025ರ ಜನವರಿ 20ರಂದು ಬಿಡುಗಡೆ ಮಾಡಿದರು.