* ಭಾರತವು 2025ರಲ್ಲಿ ಜಾಗತಿಕ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲಿ ಭಾರತದ 6 ನಗರಗಳು ಸ್ಥಾನ ಪಡೆದಿವೆ.* ಏಷ್ಯಾ-ಪೆಸಿಫಿಕ್ ಪ್ರದೇಶದ ತಾಂತ್ರಿಕ ಪ್ರತಿಭೆಗಳ ಸ್ಪರ್ಧೆಯಲ್ಲಿ ಭಾರತ ಪ್ರಮುಖ ಭೂಮಿಕೆ ವಹಿಸುತ್ತಿದೆ.* ಈ ಪಟ್ಟಿಯಲ್ಲಿ ಭಾರತೀಯ ನಗರಗಳಾದ ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ, ಪುಣೆ ಮತ್ತು ದೆಹಲಿ ಟಾಪ್ 10 ಪಟ್ಟಿಗೆ ಪ್ರವೇಶಿಸಿರುವವು. ಜಪಾನ್ನ ಟೋಕಿಯೋ ಮತ್ತು ಚೀನಾದ ಬೀಜಿಂಗ್ ಕೂಡ ಈ ಪಟ್ಟಿಯಲ್ಲಿವೆ ಎಂದು ಕೊಲಿಯರ್ಸ್ ವರದಿ ತಿಳಿಸಿದೆ. * ಭಾರತದ ಟೈರ್-1 ನಗರಗಳಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯಯುತ ಮಾನವ ಸಂಪತ್ತು ದೊರೆಯುತ್ತಿದೆ. ಇದರೊಂದಿಗೆ ಉತ್ತಮ ಕಚೇರಿ ಸ್ಥಳ, ಐಟಿ ಮೂಲಸೌಕರ್ಯ ಮತ್ತು ವೆಚ್ಚ ಸ್ಪರ್ಧಾತ್ಮಕತೆಯಿಂದ ಭಾರತ ಜಾಗತಿಕ ತಂತ್ರಜ್ಞಾನ ವಿಸ್ತರಣೆಯ ಕೇಂದ್ರವಾಗಿ ಪರಿಣಮಿಸುತ್ತಿದೆ.* ಭಾರತವು ತಂತ್ರಜ್ಞಾನ ಆಧರಿತ ಜಾಗತಿಕ ಆರ್ಥಿಕ ವಿಸ್ತರಣೆಯ ಪ್ರಮುಖ ಗುರಿಯಾಗಿ ಹೊರಹೊಮ್ಮುತ್ತಿದೆ ಎಂದು ಮೆಹೋತ್ರಾ ಹೇಳಿದ್ದಾರೆ. ಇದರಲ್ಲಿಗೆ ಅತ್ಯುತ್ತಮ ಗುಣಮಟ್ಟದ ಕಚೇರಿ ಸ್ಥಳಗಳು, ಉತ್ತಮ ಐಟಿ ಮೂಲಸೌಕರ್ಯ ಹಾಗೂ ಕಡಿಮೆ ವೆಚ್ಚದ ಸ್ಪರ್ಧಾತ್ಮಕತೆ ಕಾರಣವಾಗಿದೆ.* ಈ ವಿಶ್ಲೇಷಣೆಯು 200ಕ್ಕೂ ಹೆಚ್ಚು ಜಾಗತಿಕ ಮಾರುಕಟ್ಟೆಗಳಲ್ಲಿನ ಪ್ರತಿಭಾ ಕೌಶಲ, ಕಾರ್ಮಿಕ ಸೂಚ್ಯಂಕ, ಹೂಡಿಕೆ ಪ್ರಮಾಣ ಮತ್ತು ಉದ್ಯಮ ಕ್ಷೇತ್ರಗಳ ಸಂಯೋಜನೆಯಂತಹ ಅಂಶಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.