* ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯಿಂದ ಪ್ರೇರಣೆ ಪಡೆದಿರುವ ತಮಿಳುನಾಡು ಸರ್ಕಾರ ಪ್ರತಿ ಕುಟುಂಬದ ಅರ್ಹ ಯಜಮಾನಿಗೆ ಪ್ರತಿ ತಿಂಗಳು ತಲಾ 1 ಸಾವಿರ ರೂ.ನಂತೆ ಆ ರಾಜ್ಯದ 1.06 ಕೋಟಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಬೃಹತ್ ಯೋಜನೆಗೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೆ.15ರಿಂದ ಚಾಲನೆ ನೀಡಲಿದ್ದಾರೆ.* ಯೋಜನೆ ಅಡಿಯಲ್ಲಿ 1.06 ಕೋಟಿ ಮಹಿಳೆಯರನ್ನು (1,06,50,000) ಫಲಾನುಭವಿಗಳೆಂದು ಸರ್ಕಾರ ಗುರುತಿಸಿದೆ ಮತ್ತು 1,000 ರೂ ಆರ್ಥಿಕ ನೆರವನ್ನು ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.* ಈ ಸಹಾಯಧನ ಯೋಜನೆಗೆ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಹೆಸರನ್ನು ಇಡಲಾಗಿದೆ ಮತ್ತು ರಾಜ್ಯ ಸರ್ಕಾರವು ಈ ಯೋಜನೆಯನ್ನು ಮಹಿಳೆಯರ ಹಕ್ಕು' ಎಂದು ಕರೆದಿದೆ.