* ಪ್ರಧಾನಮಂತ್ರಿ, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯಗಳ ಸಚಿವರು 30 ದಿನಗಳ ಕಾಲ ಬಂಧನದಲ್ಲಿದ್ದರೆ ಅಥವಾ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರೆ, ಅವರನ್ನು ಸ್ವಯಂಚಾಲಿತವಾಗಿ ಹುದ್ದೆಯಿಂದ ಪದಚ್ಯುತಗೊಳಿಸುವಂತೆ ಮೂರು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು 2025ರಲ್ಲಿ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮಂಡಿಸಲಿದ್ದಾರೆ.🔹 ಮುಖ್ಯ ಅಂಶಗಳು* 30 ದಿನಗಳ ನಿರಂತರ ನ್ಯಾಯಾಂಗ ಬಂಧನದ 31ನೇ ದಿನ ಅಧಿಕಾರ ಕಳೆದುಕೊಳ್ಳುತ್ತಾರೆ.* ಬಂಧನದಿಂದ ಬಿಡುಗಡೆಯಾದ ಬಳಿಕ ಮತ್ತೆ ಪ್ರಧಾನಮಂತ್ರಿ, ಮುಖ್ಯಮಂತ್ರಿ ಅಥವಾ ಸಚಿವರಾಗಲು ಅವಕಾಶ ಇದೆ.* ಪ್ರಧಾನಮಂತ್ರಿಗೆ ರಾಷ್ಟ್ರಪತಿ, ಮುಖ್ಯಮಂತ್ರಿಗೆ ರಾಜ್ಯಪಾಲ ಹಾಗೂ ಯುಟಿಗಳಿಗೆ ರಾಷ್ಟ್ರಪತಿ/ಲೆ.ಗವರ್ನರ್ ಅಧಿಕಾರಿಗಳಾಗುತ್ತಾರೆ.🔹 ತಿದ್ದುಪಡಿ ವಿವರ* ಸಂವಿಧಾನದ 75ನೇ ವಿಧಿಗೆ Section 5(ಎ) ಸೇರ್ಪಡೆ.* ಪ್ರಧಾನಿಯೇ ಬಂಧನದಲ್ಲಿದ್ದರೆ, 31ನೇ ದಿನ ರಾಜೀನಾಮೆ ನೀಡದಿದ್ದರೂ ಸ್ವಯಂಚಾಲಿತವಾಗಿ ಹುದ್ದೆ ಕಳೆದುಕೊಳ್ಳುತ್ತಾರೆ.* ರಾಜ್ಯಗಳಿಗೂ ಇದೇ ನಿಯಮ ಅನ್ವಯವಾಗುತ್ತದೆ.- ಕಳೆದ ದಿನಗಳಲ್ಲಿ ಅರವಿಂದ ಕೇಜ್ರಿವಾಲ್ , ಹೇಮಂತ್ ಸೊರೇನ್ ಹಾಗೂ ಸೆಂಥಿಲ್ ಬಾಲಾಜಿ ಬಂಧನದಲ್ಲಿದ್ದರೂ ಹುದ್ದೆಯಲ್ಲಿ ಮುಂದುವರಿದ ಪ್ರಕರಣಗಳ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಪ್ರಸ್ತಾಪಿಸಲಾಗಿದೆ.