* ಥಾಯ್ಲೆಂಡ್ನ ಸಾಂವಿಧಾನಿಕ ನ್ಯಾಯಾಲಯವು ಪ್ರಧಾನಿ ಪೆಟೊಂತಾರ್ನ್ ಶಿನೊವಾತ್ರಾ ಅವರನ್ನು ಸಾಂವಿಧಾನಿಕ ನಿಯಮ ಉಲ್ಲಂಘನೆ ಕಾರಣದಿಂದ ಶುಕ್ರವಾರದಂದು (ಆಗಸ್ಟ್ 29) ವಜಾಗೊಳಿಸಿತು.* ಈ ಪ್ರಕರಣವು ಶಿನೊವಾತ್ರಾ ಮತ್ತು ಕಾಂಬೊಡಿಯಾ ಸೆನೆಟ್ ಅಧ್ಯಕ್ಷ ಹುನ್ ಸೆನ್ ಅವರ ನಡುವೆ ನಡೆದ ದೂರವಾಣಿ ಸಂಭಾಷಣೆ ಸೋರಿಕೆಯಿಂದ ಆರಂಭಗೊಂಡಿತು. * ಸಂಭಾಷಣೆಯಲ್ಲಿ ಅವರು ರಾಷ್ಟ್ರೀಯ ಭದ್ರತೆ ವಿಷಯಗಳ ಜೊತೆಗೆ ಸೇನಾ ಜನರಲ್ಗಳ ವಿರುದ್ಧದ ಅಸಮಾಧಾನವನ್ನು ಹಂಚಿಕೊಂಡಿದ್ದರು.* ಜುಲೈ 1ರಂದು ನ್ಯಾಯಾಲಯ ವಿಚಾರಣೆ ಪ್ರಾರಂಭಿಸಿ ಶಿನೊವಾತ್ರಾ ಅವರನ್ನು ಅಮಾನತುಗೊಳಿಸಿತ್ತು ಮತ್ತು ಉಪ ಪ್ರಧಾನಿ ಫುಮ್ತಾಮ್ಗೆ ತಾತ್ಕಾಲಿಕ ಅಧಿಕಾರ ನೀಡಲಾಗಿತ್ತು.* ಶಿನೊವಾತ್ರಾ ಅಧಿಕಾರದಿಂದ ಕೆಳಗಿಳಿದಿರುವುದರಿಂದ, ಹೊಸ ಪ್ರಧಾನಿ ಆಯ್ಕೆಯಾಗುವವರೆಗೂ ಫುಮ್ತಾಮ್ ನೇತೃತ್ವದ ಸಂಪುಟವು ಹಂಗಾಮಿ ಸರ್ಕಾರವಾಗಿ ಮುಂದುವರಿಯಲಿದೆ.