Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಥಾಯ್ಲೆಂಡ್–ಕಾಂಬೋಡಿಯಾ ತಕ್ಷಣದ ಕದನ ವಿರಾಮ ಘೋಷಣೆ
29 ಡಿಸೆಂಬರ್ 2025
* ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಗಡಿ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ದೊರೆತಿದೆ. ಉಭಯ ರಾಷ್ಟ್ರಗಳು 72 ಗಂಟೆಗಳ ಕಾಲ ಜಾರಿಯಾಗುವ
ತಕ್ಷಣದ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿವೆ
. ಈ ಒಪ್ಪಂದವು ಡಿಸೆಂಬರ್ 27, 2025ರ ಮಧ್ಯಾಹ್ನ 12:00 ಗಂಟೆಯಿಂದ ಜಾರಿಗೆ ಬಂದಿದೆ.
* ಗಡಿ ಪ್ರದೇಶಗಳ ಮೇಲಿನ ಹಕ್ಕು ವಿಚಾರವಾಗಿ ಕಳೆದ ಕೆಲವು ತಿಂಗಳುಗಳಿಂದ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಇತ್ತೀಚೆಗೆ ನಡೆದ ಭಾರೀ ಹೋರಾಟದಲ್ಲಿ ವೈಮಾನಿಕ ದಾಳಿಗಳು ನಡೆದಿದ್ದು, ಹತ್ತಾರು ಜನರು ಮೃತಪಟ್ಟಿದ್ದರು. ಇದರ ಪರಿಣಾಮವಾಗಿ ಗಡಿಭಾಗದ ಲಕ್ಷಾಂತರ ನಾಗರಿಕರು ಸ್ಥಳಾಂತರಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
* ಕದನ ವಿರಾಮ ಒಪ್ಪಂದದ ಪ್ರಕಾರ,
ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು
ಉಭಯ ದೇಶಗಳು ಒಪ್ಪಿಕೊಂಡಿವೆ. ನಾಗರಿಕರು, ನಾಗರಿಕ ವಸ್ತುಗಳು, ಮೂಲಸೌಕರ್ಯಗಳು ಹಾಗೂ ಮಿಲಿಟರಿ ಗುರಿಗಳ ಮೇಲೆ ಯಾವುದೇ ದಾಳಿಗಳನ್ನು ನಡೆಸಬಾರದು ಎಂದು ಸ್ಪಷ್ಟವಾಗಿ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, ವಾಯುಪ್ರದೇಶ ಉಲ್ಲಂಘನೆಗೂ ನಿರ್ಬಂಧ ವಿಧಿಸಲಾಗಿದೆ.
* ಒಪ್ಪಂದದ ಮತ್ತೊಂದು ಪ್ರಮುಖ ಅಂಶವೆಂದರೆ,
ಗಡಿಯಲ್ಲಿ ಹೆಚ್ಚುವರಿ ಸೇನಾ ನಿಯೋಜನೆ ಮಾಡದೇ, ಈಗಿರುವ ಪಡೆಗಳನ್ನೇ ಮುಂದುವರಿಸುವುದು
. ಹೆಚ್ಚುವರಿ ಪಡೆಗಳ ನಿಯೋಜನೆ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸುತ್ತದೆ ಎಂಬ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಈ ಕದನ ವಿರಾಮದ ಅನುಷ್ಠಾನವನ್ನು
ಆಸಿಯಾನ್ (ASEAN) ವೀಕ್ಷಕ ತಂಡ ಮೇಲ್ವಿಚಾರಣೆ ಮಾಡಲಿದೆ
.
* ಇದೇ ವೇಳೆ, ಥಾಯ್ಲೆಂಡ್ ವಶದಲ್ಲಿರುವ ಕಾಂಬೋಡಿಯಾದ
18 ಸೈನಿಕರನ್ನು
ಬಿಡುಗಡೆ ಮಾಡಿ ಮರಳಿಸುವಂತೆ ಷರತ್ತು ವಿಧಿಸಲಾಗಿದೆ. ಯಾವುದೇ ಸಮಸ್ಯೆಗಳು ಎದುರಾದಲ್ಲಿ ಸ್ಥಳದಲ್ಲಿಯೇ ಬಗೆಹರಿಸಲು ಉಭಯ ದೇಶಗಳು ಮುಕ್ತ ಸಂವಹನ ಮುಂದುವರಿಸುವುದಕ್ಕೂ ಒಪ್ಪಿಕೊಂಡಿವೆ.
* ಗಮನಾರ್ಹ ವಿಷಯವೆಂದರೆ, ಜುಲೈನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮವನ್ನು ಉಭಯ ರಾಷ್ಟ್ರಗಳು ಉಲ್ಲಂಘಿಸಿದ್ದವು. ಇದರ ಪರಿಣಾಮವಾಗಿ ಡಿಸೆಂಬರ್ 8ರಿಂದ ಸುಮಾರು 20 ದಿನಗಳ ಕಾಲ ತೀವ್ರ ಯುದ್ಧ ನಡೆಯಿತು. ಇದೀಗ
ಒಂದು ವರ್ಷದಲ್ಲೇ ಎರಡನೇ ಬಾರಿ ಕದನ ವಿರಾಮಕ್ಕೆ
ಉಭಯ ದೇಶಗಳು ಒಪ್ಪಿಕೊಂಡಿವೆ.
Take Quiz
Loading...