* ಕೇಂದ್ರ ಸರ್ಕಾರವು ರಾಜ್ಯಗಳಿಗೆ ತೆರಿಗೆ ಪಾಲಿನ ಹಣ ಬಿಡುಗಡೆ ಮಾಡಿದ್ದು, ಒಟ್ಟು ₹1,01,603 ಕೋಟಿ ರೂ. ವಿತರಿಸಲಾಗಿದೆ.* ಇದು ಅಕ್ಟೋಬರ್ 10ರಂದು ಬಿಡುಗಡೆಯಾಗಬೇಕಿದ್ದ ಸಾಮಾನ್ಯ ಮಾಸಿಕ ಹಂಚಿಕೆ ₹81,735 ಕೋಟಿಗಿಂತ ಹೆಚ್ಚಾಗಿದೆ. ಹಬ್ಬದ ಋತು, ಅಭಿವೃದ್ಧಿ ಮತ್ತು ಬಂಡವಾಳ ವೆಚ್ಚಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.* ರಾಜ್ಯವಾರು ಹಂಚಿಕೆಯಲ್ಲಿ ಉತ್ತರ ಪ್ರದೇಶಕ್ಕೆ ಅತಿ ಹೆಚ್ಚು ₹18,227 ಕೋಟಿ ರೂ., ನಂತರ ಬಿಹಾರಕ್ಕೆ ₹10,219 ಕೋಟಿ ರೂ., ಮಧ್ಯಪ್ರದೇಶಕ್ಕೆ ₹7,976 ಕೋಟಿ ರೂ., ಪಶ್ಚಿಮ ಬಂಗಾಳಕ್ಕೆ ₹7,644 ಕೋಟಿ ರೂ. ಹಾಗೂ ಮಹಾರಾಷ್ಟ್ರಕ್ಕೆ ₹6,418 ಕೋಟಿ ರೂ. ಹಂಚಿಕೆಯಾಗಿದೆ.* ಕರ್ನಾಟಕಕ್ಕೆ ₹3,705 ಕೋಟಿ ರೂ. ಸಿಕ್ಕಿದೆ. ಇತರ ಪ್ರಮುಖ ಹಂಚಿಕೆಗಳಲ್ಲಿ ಓಡಿಶಾ (₹4,601 ಕೋಟಿ), ರಾಜಸ್ಥಾನ (₹6,123 ಕೋಟಿ), ತಮಿಳುನಾಡು (₹4,144 ಕೋಟಿ), ಗುಜರಾತ್ (₹3,534 ಕೋಟಿ), ಛತ್ತೀಸ್ಗಢ (₹3,462 ಕೋಟಿ) ಸೇರಿವೆ.* ಸಣ್ಣ ರಾಜ್ಯಗಳಿಗೆ ಕೂಡ ಹಣ ಬಿಡುಗಡೆಯಾಗಿದ್ದು, ಗೋವಾ (₹392 ಕೋಟಿ), ಸಿಕ್ಕಿಂ (₹394 ಕೋಟಿ), ಮಣಿಪುರ (₹727 ಕೋಟಿ), ಮಿಜೋರಾಂ (₹508 ಕೋಟಿ), ನಾಗಾಲ್ಯಾಂಡ್ (₹578 ಕೋಟಿ) ಗಳಿಗೆ ಹಂಚಿಕೆ ಮಾಡಲಾಗಿದೆ.