* ತೆಲಂಗಾಣ ಸರ್ಕಾರ ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ದಿನಕ್ಕೆ 10 ಗಂಟೆಗಳ ಕೆಲಸ ಮಾಡುವಂತೆ ಅನುಮತಿ ನೀಡಿದೆ. ಆದರೆ ವಾರಕ್ಕೆ 48 ಗಂಟೆ ಮಿತಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದೆ. ಈ ಕ್ರಮ ಉದ್ಯಮ ಸ್ನೇಹಿ ನೀತಿಯ ಅಂಗವಾಗಿದೆ.* ಅಂಗಡಿಗಳನ್ನು ಹೊರತುಪಡಿಸಿ ಇತರ ವಾಣಿಜ್ಯ ಸಂಸ್ಥೆಗಳಲ್ಲಿ ಈ ನಿಯಮ ಅನ್ವಯವಾಗುತ್ತದೆ.* ಉದ್ಯೋಗಿ ದಿನಕ್ಕೆ 6 ಗಂಟೆ ಕೆಲಸ ಮಾಡಿದರೆ 30 ನಿಮಿಷ ವಿಶ್ರಾಂತಿ ಕಡ್ಡಾಯ. ದಿನದ ಗರಿಷ್ಠ ಕೆಲಸ 12 ಗಂಟೆ (ಓವರ್ಟೈಂ ಸೇರಿ) ಹಾಗೂ 3 ತಿಂಗಳಿಗೆ 144 ಗಂಟೆಗಳ ಮಿತಿಯನ್ನು ಸರ್ಕಾರ ನಿಗದಿ ಮಾಡಿದೆ.* ವಿಶ್ವದ ಶ್ರೇಷ್ಠ ವರ್ಕ್ ಲೈಫ್ ಬ್ಯಾಲೆನ್ಸ್ ಹೊಂದಿರುವ ದೇಶಗಳ ಪಟ್ಟಿಯಲ್ಲಿ ನ್ಯೂಝಿಲ್ಯಾಂಡ್ ಮೊದಲ ಸ್ಥಾನದಲ್ಲಿದ್ದು, ವಾರ್ಷಿಕ 32 ರಜೆ, 26 ವಾರ ಮೆಟರ್ನಿಟಿ ಲೀವ್ ಅನ್ನು ನೀಡುತ್ತದೆ.* ಐರ್ಲ್ಯಾಂಡ್ನಲ್ಲಿ 77.89% ವರ್ಕ್ ಲೈಫ ಬ್ಯಾಲೆನ್ಸ್, 30 ರಜೆ ಹಾಗೂ 26 ವಾರ ವೇತನದ ಮೆಟರ್ನಿಟಿ ಲೀವ್ ಇದೆ. ಬೆಲ್ಜಿಯಂನಲ್ಲಿ 73.45% ಬ್ಯಾಲೆನ್ಸ್, 30 ರಜೆ ಹಾಗೂ 15 ವಾರಗಳ ಮೆಟರ್ನಿಟಿ ಲೀವ್ ನೀಡಲಾಗುತ್ತದೆ.* ಡೆನ್ಮಾರ್ಕ್ನಲ್ಲಿ 35 ವಾರ್ಷಿಕ ರಜೆ, 15 ವಾರ ಮೆಟರ್ನಿಟಿ ಲೀವ್ ಮತ್ತು 100% ವೇತನದ ಸಿಕ್ ಲೀವ್ ಇದೆ. ಕೆನಡಾದಲ್ಲಿ 17 ವಾರ್ಷಿಕ ರಜೆ, 17 ವಾರ ಮೆಟರ್ನಿಟಿ ಲೀವ್ ಇದೆ, ಬ್ಯಾಲೆನ್ಸ್ ಶೇಕಡಾ 72.75.* ಭಾರತ ಟಾಪ್ 50 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದರೆ ಕೆಲಸದ ಒತ್ತಡ, ನಿರ್ದಿಷ್ಟ ಬೇನೆಗಳ ಕೊರತೆಗಳಿಂದ ಕೆಲಸ-ಜೀವನ ಸಮತೋಲನ ಇನ್ನೂ ಉತ್ತಮಗೊಳ್ಳಬೇಕಿದೆ.